×
Ad

ಡೆಲ್ಲಿ ಕ್ಯಾಪಿಟಲ್ಸ್‌ | ಪಾಂಟಿಂಗ್ ಸ್ಥಾನಕ್ಕೆ ಯುವರಾಜ್?

Update: 2024-08-25 23:00 IST

Photo: PTI

ಹೊಸದಿಲ್ಲಿ : ಇಂಡಿಯನ್ ಪ್ರೀಮಿಯರ್ ಲೀಗ್‌ನ 2025ರ ಆವೃತ್ತಿಗಾಗಿ ನಡೆಯಲಿರುವ ಬೃಹತ್ ಹರಾಜಿನ ಮುನ್ನ, ತಂಡದ ಕೋಚಿಂಗ್ ಪಾತ್ರವನ್ನು ವಹಿಸುವಂತೆ ಕೋರಿ ಡೆಲ್ಲಿ ಕ್ಯಾಪಿಟಲ್ಸ್ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್‌ರನ್ನು ಸಂಪರ್ಕಿಸಿದೆ ಎನ್ನಲಾಗಿದೆ.

ಏಳು ವರ್ಷ ಡೆಲ್ಲಿ ಕ್ಯಾಪಿಟಲ್ಸ್‌ನ ಕೋಚ್ ಆಗಿದ್ದ ಆಸ್ಟ್ರೇಲಿಯ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಕಳೆದ ತಿಂಗಳು ನಿರ್ಗಮಿಸಿದ್ದಾರೆ.

ಐಪಿಎಲ್‌ನಲ್ಲಿ ಹಲವು ವರ್ಷಗಳಿಂದ ಕಳಪೆ ನಿರ್ವಹಣೆ ನೀಡುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್, ಯುವರಾಜ್ ಸಿಂಗ್‌ರನ್ನು ಕೋಚ್ ಹುದ್ದೆಗೆ ನೇಮಿಸಲು ಉತ್ಸುಕವಾಗಿದೆ ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News