×
Ad

ಭಾರತದ ಬೌಲಿಂಗ್ ಕೋಚ್ ಹುದ್ದೆಗಾಗಿ ಝಹೀರ್ ಖಾನ್, ಎಲ್.ಬಾಲಾಜಿ ಪೈಪೋಟಿ?

Update: 2024-07-10 20:56 IST

 ಝಹೀರ್ ಖಾನ್(PTI) | ಎಲ್.ಬಾಲಾಜಿ (X | IPL)

ಹೊಸದಿಲ್ಲಿ : ಮಾಜಿ ವೇಗದ ಬೌಲರ್ಗಳಾದ ಝಹೀರ್ ಖಾನ್ ಹಾಗೂ ಲಕ್ಷ್ಮೀಪತಿ ಬಾಲಾಜಿ ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಕೋಚಿಂಗ್ ಸಿಬ್ಬಂದಿಯ ಭಾಗವಾಗಲು ಪೈಪೋಟಿ ನಡೆಸುತ್ತಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.

ಪರಾಸ್ ಮ್ಹಾಂಬ್ರೆ ತನ್ನ ಅವಧಿಯನ್ನು ಪೂರೈಸಿದ್ದು, ಅವರಿಂದ ತೆರವಾಗಿರುವ ಬೌಲಿಂಗ್ ಕೋಚ್ ಹುದ್ದೆಗಾಗಿ ಝಹೀರ್ ಹಾಗೂ ಬಾಲಾಜಿ ನಡುವೆ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ.

ಬೌಲಿಂಗ್ ಕೋಚ್ ಹುದ್ದೆಗೆ ಝಹೀರ್ ಖಾನ್ ಹಾಗೂ ಎಲ್.ಬಾಲಾಜಿ ಹೆಸರುಗಳನ್ನು ಬಿಸಿಸಿಐ ಚರ್ಚಿಸಿದೆ. ವಿನಯಕುಮಾರ್ ಮೇಲೆ ಬಿಸಿಸಿಐಗೆ ಆಸಕ್ತಿ ಇಲ್ಲ ಎಂದು ಎಎನ್ಐಗೆ ಮೂಲಗಳು ತಿಳಿಸಿವೆ.

ಝಹೀರ್ ಭಾರತ ಕಂಡ ಶ್ರೇಷ್ಠ ಎಡಗೈ ವೇಗದ ಬೌಲರ್ಗಳ ಪೈಕಿ ಒಬ್ಬರಾಗಿದ್ದು 92 ಟೆಸ್ಟ್ ಪಂದ್ಯಗಳಲ್ಲಿ 311 ವಿಕೆಟ್ಗಳನ್ನು ಕಬಳಿಸಿದ್ದರು. ಭಾರತೀಯ ಕ್ರಿಕೆಟ್ ತಂಡದ ಪರ ಎಲ್ಲ ಮಾದರಿಯ ಕ್ರಿಕೆಟ್ನಲ್ಲಿ 309 ಅಂತರ್ರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 610 ವಿಕೆಟ್ಗಳನ್ನು ಪಡೆದಿದ್ದಾರೆ.

ತಮಿಳುನಾಡಿನ ಆಟಗಾರ ಬಾಲಾಜಿ 8 ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದು 27 ವಿಕೆಟ್ಗಳನ್ನು ಉರುಳಿಸಿದ್ದರು. 30 ಏಕದಿನ ಪಂದ್ಯಗಳಲ್ಲಿ 34 ವಿಕೆಟ್ಗಳನ್ನು ಪಡೆದಿದ್ದರು

ಗಂಭೀರ್ ಅವರನ್ನು ಮುಖ್ಯ ಕೋಚ್ ಆಗಿ ಬಿಸಿಸಿಐ ಮಂಗಳವಾರ ನೇಮಕ ಮಾಡಿದ ನಂತರ ಭಾರತೀಯ ಕ್ರಿಕೆಟ್ ತಂಡಕ್ಕೆ ನೂತನ ಸಹಾಯಕ ಸಿಬ್ಬಂದಿಯ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News