ಎರಡು ವರ್ಷದ ಮಗು ಕೀರ್ತನಾ ವೈದ್ಯಕೀಯ ನೆರವಿಗೆ ಮೋಹನ್ ದಾಸ್ ಪೈ, ರವಿ ಪೈಗೆ ಸಚಿವ ಝಮೀರ್ ಅಹ್ಮದ್ ಮನವಿ
Update: 2025-06-12 00:07 IST
ಬೆಂಗಳೂರು: ಅನುವಂಶೀಯ ಅಸ್ವಸ್ಥತೆ ಕಾಯಿಲೆಯಿಂದ ಬಳಲುತ್ತಿರುವ ಮೈಸೂರಿನ ನಾಗಶ್ರೀ-ಕಿಶೋರ್ ದಂಪತಿಯ ಎರಡು ವರ್ಷದ ಮಗು ಕೀರ್ತನಾಗೆ ಸಿಎಸ್‍ಆರ್ ನಿಧಿಯಡಿ ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡುವಂತೆ ಸಚಿವ ಝಮೀರ್ ಅಹ್ಮದ್ ಖಾನ್ ಅವರು, ಮಣಿಪಾಲ್ ಗ್ಲೋಬಲ್ ಎಜುಕೇಶನ್ ಸರ್ವಿಸಸ್ ಮುಖ್ಯಸ್ಥ ಮೋಹನ್ ದಾಸ್ ಪೈ ಹಾಗೂ ಸೆಂಚುರಿ ಬಿಲ್ಡರ್ಸ್ ನ ರವಿ ಪೈ ಅವರಿಗೆ ಮನವಿ ಸಲ್ಲಿಸಿದರು.
ಕೀರ್ತನಾ ವೈದ್ಯಕೀಯ ಚಿಕಿತ್ಸೆಗೆ 16 ಕೋಟಿ ರೂ. ವೆಚ್ಚ ಆಗಲಿದ್ದು ಝಮೀರ್ ಅಹ್ಮದ್ ಖಾನ್ ಈಗಾಗಲೇ ವೈಯಕ್ತಿಕವಾಗಿ 25 ಲಕ್ಷ ರೂ.ನೀಡಿದ್ದಾರೆ. ಜತೆಗೆ ಕಾರ್ಪೂರೇಟ್ ಕಂಪನಿಗಳಿಗೆ ನೆರವಿಗಾಗಿ ಮನವಿ ಮಾಡುತ್ತಿದ್ದಾರೆ. ಇತ್ತೀಚಿಗೆ ಇಂಡಿಯಾ ಬಿಲ್ಡರ್ಸ್ ನ ಝಿಯಾವುಲ್ಲಾ ಶರೀಫ್ ಅವರಿಗೂ ಮನವಿ ಮಾಡಿದ್ದರು.