×
Ad

ಅಡ್ಡದಾರಿಯಲ್ಲಿ ಹೋಗುವವರಿಗೆ ಮಾತ್ರ ಬಿಜೆಪಿಯಲ್ಲಿ ಮನ್ನಣೆ: ಕಾಂಗ್ರೆಸ್‌ ವ್ಯಂಗ್ಯ

Update: 2023-12-12 13:04 IST

ಬೆಂಗಳೂರು: ಬಿಜೆಪಿ ಪಕ್ಷದಲ್ಲಿ ಅರ್ಹತೆ, ಸಾಮರ್ಥ್ಯಗಳಿಂದ ಯಾರೂ ಹುದ್ದೆ ಪಡೆಯುವುದಿಲ್ಲ. ಅಡ್ಡದಾರಿಯಲ್ಲಿ ಹೋಗುವವರಿಗೆ ಮಾತ್ರ ಮನ್ನಣೆ ಎಂದು ಕಾಂಗ್ರೆಸ್‌ ಲೇವಡಿ ಮಾಡಿದೆ.

ಈ ಸಂಬಂಧ ʼಎಕ್ಸ್‌ʼ ನಲ್ಲಿ ಬರೆದುಕೊಂಡಿರುವ ಕಾಂಗ್ರೆಸ್‌, ಅಶೋಕ್  ಅವರು ಬಕೆಟ್ ಹಿಡಿದು ವಿರೋಧ ಪಕ್ಷದ ನಾಯಕರಾಗಿದ್ದಾರೆ ಎಂದು ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಹೇಳಿದ್ದಾರೆ. ಬಿವೈ ವಿಜಯೇಂದ್ರ ಅವರು ಬ್ಲಾಕ್ಮೇಲ್ ಮಾಡಿ ಅಧ್ಯಕ್ಷರಾಗಿದ್ದಾರೆ ಎಂದು ಬಿಜೆಪಿ ಶಾಸಕ ಯತ್ನಾಳ್ ಹೇಳಿಕೆ ನೀಡಿದ್ದಾರೆ.  ಬಿಜೆಪಿ ಪಕ್ಷದಲ್ಲಿ ಅರ್ಹತೆ, ಸಾಮರ್ಥ್ಯಗಳಿಂದ ಯಾರೂ ಹುದ್ದೆ ಪಡೆಯುವುದಿಲ್ಲ. ಅಡ್ಡದಾರಿಯಲ್ಲಿ ಹೋಗುವವರಿಗೆ ಮಾತ್ರ ಬಿಜೆಪಿಯಲ್ಲಿ ಮನ್ನಣೆ ಎನ್ನುವುದು ಈ ಮೂಲಕ ಸಾಬೀತಾಗಿದೆ ಎಂದು ಕಾಂಗ್ರೆಸ್‌ ವ್ಯಂಗ್ಯವಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News