×
Ad

ಸಾಕು ನಾಯಿಯನ್ನು ಕೊಂದಿದ್ದ ಚಿರತೆಯ ಹತ್ಯೆ; ಆರೋಪಿಯ ಬಂಧನ

Update: 2023-06-23 11:26 IST

ಚಾಮರಾಜನಗರ: ಸಾಕು ನಾಯಿ ಕೊಂದಿದ್ದ ಚಿರತೆಯನ್ನು ಹತ್ಯೆಗೈದ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ.

ಚಾಮರಾಜನಗರ ಜಿಲ್ಲೆಯ ಬಂಡಿಪುರ ವ್ಯಾಪ್ತಿಯ ಕೂತನೂರು ಎಲ್ಲೆ ಗ್ರಾಮದ ಜಿ.ಆರ್. ಗೋವಿಂದರಾಜು ಎಂಬುವರ ಜಮೀನಿನಲ್ಲಿ ಮೂರು ವರ್ಷದ ಹೆಣ್ಣು ಚಿರತೆಯ ಕಳೇಬರ ಪತ್ತೆಯಾಗಿದೆ.

ಆರೋಪಿಯನ್ನು ಮಲ್ಲಯ್ಯನಪುರ ಗ್ರಾಮದ ರಮೇಶ್ ಎಂದು ಗುರುತಿಸಲಾಗಿದೆ. ಜಮೀನು ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ರಮೇಶ್ ನನ್ನು ಈಗ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ ಎಂದು ತಿಳಿದು ಬಂದಿದೆ.

ನಾಲ್ಕು ದಿನಗಳ ಹಿಂದೆ ಸಾಕು ನಾಯಿಯನ್ನು ಕೊಂದಿದ್ದ ಚಿರತೆಯ ಮೇಲಿನ ಸೇಡು ತೀರಿಸಿಕೊಳ್ಳಲು ಸತ್ತ ನಾಯಿಯ ಕಳೇಬರದ ಮೇಲೆ ಕೀಟನಾಶಕ ಔಷಧಿ ಸಿಂಪಡಿಸಿದ್ದ ಎನ್ನಲಾಗಿದೆ.

ಸ್ಥಳಕ್ಕೆ ಧಾವಿಸಿದ ಅರಣ್ಯಾಧಿಕಾರಿಗಳು ಚಿರತೆಯ ಅಂತ್ಯಕ್ರಿಯೆ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News