×
Ad

ಪಾಕಿಸ್ತಾನ ಸೂಪರ್ ಲೀಗ್ ಫ್ರಾಂಚೈಸಿ ಮುಲ್ತಾನ್ ಸುಲ್ತಾನ್ ಮಾಲಕ ಆಲಂಗೀರ್ ತರೀನ್ ಆತ್ಮಹತ್ಯೆ

Update: 2023-07-06 19:22 IST

ಆಲಂಗೀರ್ ತರೀನ್ (Photo : Twitter/@MultanSultans)

ಕರಾಚಿ, ಜು.7: ಪಾಕಿಸ್ತಾನ ಸೂಪರ್ ಲೀಗ್(ಪಿಎಸ್ ಎಲ್)ಫ್ರಾಂಚೈಸಿ ಮುಲ್ತಾನ್ ಸುಲ್ತಾನ್ಸ್ನ ಮಾಲಕ ಆಲಂಗೀರ್ ತರೀನ್ ಲಾಹೋರ್ ನ ಗುಲ್ಬರ್ಗ್ ಪ್ರದೇಶದಲ್ಲಿನ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರತಿಷ್ಠಿತ ಯೇಲ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿರುವ 63ರ ವಯಸ್ಸಿನ ಆಲಂಗೀರ್ ಅವರು ದಕ್ಷಿಣ ಪಂಜಾಬ್(ಪಾಕಿಸ್ತಾನ)ನಲ್ಲಿ ಪ್ರಮುಖ ಉದ್ಯಮಿಯಾಗಿ ಪ್ರಸಿದ್ದಿ ಪಡೆದಿದ್ದರು. ದೇಶದ ಅತಿದೊಡ್ಡ ನೀರು ಶುದ್ದೀಕರಣ ಘಟಕಗಳಲ್ಲಿ ಒಂದನ್ನು ನಿರ್ವಹಿಸಿದ್ದರು. ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ ಅವರ ಆತ್ಮಹತ್ಯೆ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ. ಮುಲ್ತಾನ್ ಸುಲ್ತಾನ್ಸ್ ಸಿಇಒ ಹೈದರ್ ಅಝರ್ ಅವರು ಈ ಸುದ್ದಿಯನ್ನು ಸ್ವತಃ ದೃಢಪಡಿಸಿದ್ದಾರೆ. ತರೀನ್ ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.

ಆಲಂಗೀರ್ ತರೀನ್ ನಮ್ಮ ತಂಡದ ವೌಲ್ಯಯುತ ಸದಸ್ಯ ಹಾಗೂ ಗೌರವಾನ್ವಿತ ವ್ಯಕ್ತಿತ್ವ. ಅವರ ಹಠಾತ್ ಹಾಗೂ ಅಕಾಲಿಕ ನಿಧನದಿಂದ ನಮಗೆ ಅತೀವ ದುಃಖವಾಗಿದೆ. ಈ ನಂಬಲಾಗದಷ್ಟು ಕಷ್ಟದ ಸಮಯದಲ್ಲಿ ನಾವು ಅವರ ಕುಟುಂಬದೊಂದಿಗೆ ಇದ್ದೇವೆ ಎಂದು ಅಝರ್ ಹೇಳಿದ್ದಾರೆ.

ಪಿಎಸ್ ಎಲ್ ಫ್ರಾಂಚೈಸಿ ಲಾಹೋರ್ ಕೂಡ ಆಘಾತಕಾರಿ ಸುದ್ದಿಯ ಬಗ್ಗೆ ದುಃಖವನ್ನು ವ್ಯಕ್ತಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News