×
Ad

ಪಾಕಿಸ್ತಾನದ ಖ್ಯಾತ ಸ್ನೂಕರ್ ಆಟಗಾರ ಮಜೀದ್ ಅಲಿ ಆತ್ಮಹತ್ಯೆ

Update: 2023-06-30 12:05 IST

ಮಜೀದ್ ಅಲಿ, ಫೋಟೋ:  Twitter

ಕರಾಚಿ: ಪಾಕಿಸ್ತಾನದ ಖ್ಯಾತ ಸ್ನೂಕರ್ ಆಟಗಾರ ಹಾಗೂ ಏಷ್ಯನ್ ಅಂಡರ್-21 ಸ್ಪರ್ಧೆಯಲ್ಲಿ ಬೆಳ್ಳಿ ಪದಕ ವಿಜೇತ ಮಜೀದ್ ಅಲಿ ಪಂಜಾಬ್ ನ ಫೈಸಲಾಬಾದ್ ಬಳಿಯ ತನ್ನ ಹುಟ್ಟೂರಿನಲ್ಲಿ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಲಿಗೆ 28 ವರ್ಷ ವಯಸ್ಸಾಗಿತ್ತು. ಹಿಂದಿನಿಂದಲೂ ಖಿನ್ನತೆಯಿಂದ ಬಳಲುತ್ತಿದ್ದ ಅಲಿ ಮರ ಕಡಿಯುವ ಯಂತ್ರದಿಂದ ತನ್ನ ಜೀವನವನ್ನು ಕೊನೆಗೊಳಿಸಿದನು ಎಂದು ಪೊಲೀಸರು ತಿಳಿಸಿದ್ದಾರೆ.

ಅಲಿ ಹಲವಾರು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಿದರು. ರಾಷ್ಟ್ರೀಯ ಮಟ್ಟದಲ್ಲಿ ಅಗ್ರ ಶ್ರೇಯಾಂಕದ ಆಟಗಾರನಾಗಿದ್ದರು.

ಒಂದು ತಿಂಗಳಲ್ಲಿ ಸಾವನ್ನಪ್ಪಿದ ಎರಡನೇ ಸ್ನೂಕರ್ ಆಟಗಾರ ಮಜೀದ್ ಅಲಿ. ಕಳೆದ ತಿಂಗಳು, ಮತ್ತೊಬ್ಬ ಅಂತರರಾಷ್ಟ್ರೀಯ ಸ್ನೂಕರ್ ಆಟಗಾರ ಮುಹಮ್ಮದ್ ಬಿಲಾಲ್ ಹೃದಯ ಸ್ತಂಭನದಿಂದ ನಿಧನರಾಗಿದ್ದರು.

“ಮಜೀದ್ ತನ್ನ ಹದಿಹರೆಯದಿಂದಲೂ ಖಿನ್ನತೆಯಿಂದ ಬಳಲುತ್ತಿದ್ದ.ಇದು ನಮಗೆ ಭಯಾನಕ ಸಂಗತಿಯಾಗಿದೆ. ಏಕೆಂದರೆ ಅತ ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತಾನೆ ಎಂದು ನಾವು ಎಂದಿಗೂ ನಿರೀಕ್ಷಿಸಿರಲಿಲ್ಲ" ಎಂದು ಸಹೋದರ ಉಮರ್ ಹೇಳಿದರು.

ಪಾಕಿಸ್ತಾನದ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಅಧ್ಯಕ್ಷ ಅಲಂಗೀರ್ ಶೇಖ್ ಅವರು ಮಜೀದ್ ಸಾವಿನಿಂದ ಇಡೀ ಸ್ನೂಕರ್ ಸಮುದಾಯವು ದುಃಖಿತವಾಗಿದೆ ಎಂದು ಹೇಳಿದ್ದಾರೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News