×
Ad

ಉಡುಪಿ| ಯುವಕ ನಾಪತ್ತೆ: ನದಿಯಲ್ಲಿ ಕೊಚ್ಚಿಹೋದ ಬಗ್ಗೆ ಶಂಕೆ, ಮುಂದುವರಿದ ಶೋಧ

Update: 2023-07-25 13:39 IST

ಕೊಲ್ಲೂರು: ಮನೆಯಿಂದ ನಾಪತ್ತೆಯಾಗಿದ್ದ ಯುವಕನ ಪತ್ತೆಗಾಗಿ ಶೋಧಕಾರ್ಯ ಮುಂದುವರೆದಿರುವ ಬಗ್ಗೆ ವರದಿಯಾಗಿದೆ.

ಕಾಣೆಯಾದ ಯುವಕನನ್ನು ಬೈಂದೂರು ತಾಲೂಕು ಜಡ್ಕಲ್ ಗ್ರಾಮದ ಮಕ್ಕೆ ಕೊಳಕೆಹೊಳೆ ನಿವಾಸಿ ಸುರೇಶ (28) ಎಂದು ಗುರುತಿಸಲಾಗಿದೆ .

ಜುಲೈ 22ರಂದು ತನ್ನ ವಾಸದ ಮನೆಯಾದ ಮಕ್ಕೆಯ ಕೊಳಕೆಹೊಳೆ ಎಂಬಲ್ಲಿ ಮನೆ ಮಂದಿಯೊಂದಿಗೆ ಊಟ ಮಾಡಿ ರಾತ್ರಿ ಮಲಗಿದ್ದ ಸುರೇಶ್ ಜು.23ರಂದು ಬೆಳಗ್ಗೆ ಮನೆಯವರು ಎದ್ದಾಗ ನಾಪತ್ತೆಯಾಗಿರು ಬಗ್ಗೆ ಸಹೋದರ ಕೊಲ್ಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನಾಪತ್ತೆಯಾದ ಸುರೇಶನ ಪತ್ತೆಗೆ ಗ್ರಾಮಸ್ಥರ ನೆರವಿನೊಂದಿಗೆ ಶೋಧಕಾರ್ಯ ಮುಂದುವರೆದಿದ್ದು ಮನೆಪಕ್ಕದ ನದಿ ನೀರಿನಲ್ಲಿ ಕೊಚ್ಚಿ ಹೋದ ಬಗ್ಗೆ ಸಂಬಂಧಿಕರು ಶಂಕೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಕೊಲ್ಲೂರು ಠಾಣೆ ಉಪನಿರಿಕ್ಷಕಿ ಸುಧಾರಾಣಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News