×
Ad

"ನೀರಜ್ ಚೋಪ್ರಾರಂತೆ ಹೃದಯ ಗೆಲ್ಲಿ, ದಂಡದ ಚಲನ್ ಗಳನ್ನಲ್ಲ" : ಗಮನ ಸೆಳೆದ ದಿಲ್ಲಿ ಪೊಲೀಸರ ಪೋಸ್ಟ್

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ಸ್ ನಲ್ಲಿ ನೀರಜ್ ಚೋಪ್ರಾರ ಯಶಸ್ಸನ್ನು ಉಲ್ಲೇಖಿಸಿ, ರಸ್ತೆ ಸುರಕ್ಷತೆ ಹಾಗೂ ಸಂಚಾರಿ ನಿಯಮಗಳನ್ನು ಪಾಲಿಸುವ ಕುರಿತು ಜಾಗೃತಿ ಮೂಡಿಸಲು ದಿಲ್ಲಿ ಪೊಲೀಸರು ಪೋಸ್ಟ್ ಒಂದನ್ನು ಮಾಡಿ ಗಮನ ಸೆಳೆದಿದ್ದಾರೆ.

Update: 2023-08-29 18:00 IST

PC: @Neeraj_chopra1| Twitter

ಹೊಸದಿಲ್ಲಿ: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ಸ್ ನಲ್ಲಿ ನೀರಜ್ ಚೋಪ್ರಾರ ಯಶಸ್ಸನ್ನು ಉಲ್ಲೇಖಿಸಿ, ರಸ್ತೆ ಸುರಕ್ಷತೆ ಹಾಗೂ ಸಂಚಾರಿ ನಿಯಮಗಳನ್ನು ಪಾಲಿಸುವ ಕುರಿತು ಜಾಗೃತಿ ಮೂಡಿಸಲು ದಿಲ್ಲಿ ಪೊಲೀಸರು ಪೋಸ್ಟ್ ಒಂದನ್ನು ಮಾಡಿ ಗಮನ ಸೆಳೆದಿದ್ದಾರೆ. “ನೀರಜ್ ಚೋಪ್ರಾರಂತೆ ಹೃದಯಗಳನ್ನು ಗೆಲ್ಲಿ, ದಂಡದ ಚಲನ್ ಗಳನ್ನಲ್ಲ” ಎಂದು ವಾಹನ ಸವಾರರಿಗೆ ಕಿವಿಮಾತು ಹೇಳಿದ್ದಾರೆ.

“ಚಾಲಕರೇ ಮತ್ತು ಸವಾರರೇ, ನೀವು ನೀರಜ್ ಅವರ ಜಾವೆಲಿನ್ ಅಲ್ಲ. ನೀವೇನಾದರೂ ಬಿಳಿ ಪಟ್ಟಿಯನ್ನು ದಾಟಿದರೆ ಅಂಕ ಅಥವಾ ಪದಕಗಳನ್ನು ಗೆಲ್ಲುವುದಿಲ್ಲ” ಎಂದು ಛೇಡಿಸಿದ್ದಾರೆ.

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಬಂಗಾರದ ಪದಕ ಜಯಿಸಿದ ಪ್ರಥಮ ಭಾರತೀಯರಾಗುವ ಮೂಲಕ ಒಲಿಂಪಿಕ್ ವಿಜೇತ ಕ್ರೀಡಾಪಟು ನೀರಜ್ ಚೋಪ್ರಾ ಮತ್ತೊಂದು ಐತಿಹಾಸಿಕ ಸಾಧನೆಗೈದರು. ಹಂಗೇರಿಯ ಬುಡಾಪೆಸ್ಟ್ ನಲ್ಲಿ ಆಗಸ್ಟ್ 27ರಂದು ನಡೆದ ಪುರುಷರ ಜಾವೆಲಿನ್ ಫೈನಲ್ ಪಂದ್ಯದಲ್ಲಿ 88.17 ಮೀಟರ್ ನಷ್ಟು ದೂರ ಜಾವೆಲಿನ್ ಎಸೆಯುವ ಮೂಲಕ ವಿಶ್ವ ದಾಖಲೆ ಬರೆದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News