×
Ad

ನಿಮ್ಮೊಳಗಿನ ವಿಷ ಅರಿಯದ ವಿಷಾದ ನೆನಪು: ಹಳೆ ಚಿತ್ರ ಹಂಚಿಕೊಂಡ ವಿಶ್ವೇಶ್ವರ್‌ ಭಟ್‌ಗೆ ಪ್ರಕಾಶ್‌ ರಾಜ್‌ ತಿರುಗೇಟು

Update: 2023-07-17 17:01 IST

Photo : Twitter

ಬೆಂಗಳೂರು: ಪತ್ರಕರ್ತ ವಿಶ್ವೇಶ್ವರ್‌ ಭಟ್‌ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಭಾಗಿಯಾಗುವುದನ್ನು ಬಹುಭಾಷಾ ನಟ, ರಾಜಕಾರಣಿ ಪ್ರಕಾಶ್‌ ರಾಜ್‌ ಖಂಡಿಸಿದ ಬೆನ್ನಲ್ಲೇ, ವಿಶ್ವೇಶ್ವರ್‌ ಭಟ್‌ ಅವರು ಪ್ರಕಾಶ್‌ ರಾಜ್‌ ಜೊತೆಗಿರುವ ಭಾವಚಿತ್ರಗಳನ್ನು ಹಂಚಿಕೊಂಡಿದ್ದು, ಅದಕ್ಕೆ ಪ್ರಕಾಶ್‌ ರಾಜ್‌ ನೀಡಿರುವ ಉತ್ತರ ಟ್ವಿಟರ್‌ ಬಳಕೆದಾರರ ಗಮನ ಸೆಳೆದಿದೆ.

ವಿಶ್ವೇಶ್ವರ್‌ ಭಟ್‌ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಸಿಎಂ ಸಿದ್ದರಾಮಯ್ಯ ಅವರಿಗೆ ಶೋಭೆ ತರಲ್ಲ ಎಂದು ಪ್ರಕಾಶ್‌ ರಾಜ್‌ ಟ್ವೀಟ್‌ ಮಾಡಿದ್ದರು. ಇದಕ್ಕೆ ಪರೋಕ್ಷವಾಗಿ ಕುಟುಕಿದ್ದ ವಿಶ್ವೇಶ್ವರ್‌ ಭಟ್‌ ಅವರು, “ನೆನಪುಗಳು ಎಂದಿಗೂ ಮರೆಯಾಗುವುದಿಲ್ಲ! ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಾನು ಮತ್ತು ಪ್ರಕಾಶ್ ರಾಜ್” ಎಂದು ತಾವು ಹಾಗೂ ಪ್ರಕಾಶ್‌ ರಾಜ್‌ ಜೊತೆಗಿರುವ ಹಳೆಯ ಎರಡು ಚಿತ್ರಗಳನ್ನು ಟ್ವೀಟ್‌ ಮಾಡಿದ್ದರು.

ಇದರ ಬೆನ್ನಲ್ಲೇ ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರಕಾಶ್‌ ರಾಜ್‌, “ಹೌದು.. ನಿಮ್ಮೊಳಗಿನ ವಿಷ ಅರಿಯದ ..ವಿಷಾದ ಪಡಲೇಬೇಕಾದ ದಿನಗಳು “ ಎಂದು ಟ್ವೀಟ್‌ ಮಾಡಿ ತಿರುಗೇಟು ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News