×
Ad

'ವನ್ ಬಿಗ್, ಬ್ಯೂಟಿಫುಲ್ ಬಿಲ್'ಗೆ ಟ್ರಂಪ್ ಅಂಕಿತ: ಹೊಸ ಕಾನೂನಿನಲ್ಲಿ ಏನೇನಿದೆ?

Update: 2025-07-05 08:16 IST

PC:x.com/Cointelegraph

ವಾಷಿಂಗ್ಟನ್: ಮಹತ್ವಾಕಾಂಕ್ಷಿ 'ವನ್ ಬಿಗ್, ಬ್ಯೂಟಿಫುಲ್ ಬಿಲ್'ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಸಹಿ ಮಾಡಿದ್ದಾರೆ. ಇದನ್ನು ಆಡಳಿತದ ಎರಡನೇ ಅವಧಿಯಲ್ಲಿ ಟ್ರಂಪ್ಗೆ ದೊರೆತ ಶಾಸನಾತ್ಮಕ ವಿಜಯ ಎಂದು ವಿಶ್ಲೇಷಿಸಲಾಗುತ್ತಿದ್ದು, ಜೂನ್ 4ರ ವೈಟ್ಹೌಸ್ ಸಂಭ್ರಮಾಚರಣೆಯ ವೇಳೆ ಇದು ಕಾನೂನಾಗಿ ಜಾರಿಗೆ ಬರಲಿದೆ.

ಚುನಾವಣಾ ಪ್ರಚಾರದ ವೇಳೆ ನೀಡಿದ್ದ ಹಲವು ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಇದು ದೊಡ್ಡ ಹೆಜ್ಜೆ ಎಂದು ಟ್ರಂಪ್ ಬಣ್ಣಿಸಿದ್ದಾರೆ. ವಿಸ್ತøತವಾಗಿ ತೆರಿಗೆ ಕಡಿತ, ಸೇನ ವ್ಯವಸ್ಥೆಗೆ ಉತ್ತೇಜನ ಮತ್ತು ಇಮಿಗ್ರೇಷನ್ ಜಾರಿ ಮೇಲಿನ ವೆಚ್ಚ ಹೆಚ್ಚಳ ಮತ್ತು ಜನರಿಗೆ ವಿಮಾಸುರಕ್ಷೆ ಒದಗಿಸುವ ವ್ಯವಸ್ಥೆಯ ಕಡಿತ ಈ ಕಾಯ್ದೆಯ ಪ್ರಮುಖ ಅಂಶಗಳಾಗಿವೆ. ಜಾರಿಗೆ ಮುನ್ನವೇ ಪ್ರಸ್ತಾವಗಳ ಬಗ್ಗೆ ಪರ- ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು.

"ನಿಜವಾಗಿಯೂ ಆಶ್ವಾಸನೆಗಳನ್ನು ನೀಡಲಾಗಿದೆ ಮತ್ತು ಈಡೇರಿಸಲಾಗಿದೆ" ಎಂದು ಪ್ರಥಮ ಮಹಿಳೆ ಮೆಲೇನಿಯಾ ಟ್ರಂಪ್ ಜತೆಗೆ ಸೌತ್ ಲಾನ್ನಲ್ಲಿ ಸೇರಿದ್ದ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್ ಬಣ್ಣಿಸಿದರು.

ಅಮೆರಿಕದ ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆ ಮಸೂದೆಯನ್ನು ಸ್ವಾಗತಿಸಿದ್ದು, ಇಲಾಖೆ ಸುಮಾರು 165 ಶತಕೋಟಿ ಡಾಲರ್ ಪಡೆಯುವ ನಿರೀಕ್ಷೆ ಇದೆ ಎಂದು ಹೇಳಿದೆ. "ಅಮೆರಿಕದ ಜನತೆಗೆ ಟ್ರಂಪ್ ನೀಡಿದ್ದ ಭರವಸೆಗಲನ್ನು ಈಡೇರಿಸುತ್ತಿದ್ದಾರೆ. ಐತಿಹಾಸಿಕ 165 ಶತಕೋಟಿ ಡಾಲರ್ಗಳನ್ನು ಡಿಎಚ್ಎಸ್ಗೆ ಹಂಚಿಕೆ ಮಾಡಲಾಗುತ್ತಿದೆ. ಅಕ್ರಮವಾಗಿ ವಲಸೆ ಬಂದಿರುವ ಅಪರಾಧಿಗಳನ್ನು ಗಡೀಪಾರು ಮಾಡಲು, ಗಡಿಯನ್ನು ಸುಭದ್ರವಾಗಿಸಲು ಮತ್ತು ಅಮೆರಿಕವನ್ನು ಮತ್ತೆ ಸುರಕ್ಷಿತವಾಗಿಸಲು ಅಗತ್ಯವಾಗಿದ್ದ ಸಂಪನ್ಮೂಲವನ್ನು ಡಿಎಚ್ಎಸ್ಗೆ ಇದು ಒದಗಿಸಲಿದೆ" ಎಂದು ಎಕ್ಸ್ ಪೋಸ್ಟ್ನಲ್ಲಿ ಬಣ್ಣಿಸಿದೆ.

ಈ ಮಸೂದೆ ಟ್ರಂಪ್ ಎರಡನೇ ಅವಧಿಯ ಕಾರ್ಯಸೂಚಿಯ ಪ್ರಮುಖ ಆಧಾರಸ್ತಂಭ ಎನಿಸಿದ್ದು, ವಿಭಜಿತ ಅಮೆರಿಕದ ಕಾಂಗ್ರೆಸ್ನಲ್ಲಿ ವ್ಯಾಪಕ ಸಂಧಾನ ಮಾತುಕತೆಗಳ ಬಳಿಕ ಜಾರಿಗೆ ಬಂದಿದೆ. ಇದನ್ನು ಟ್ರಂಪ್ ಹಾಗೂ ಬೆಂಬಲಿಗರು ದೊಡ್ಡ ವಿಜಯ ಎಂದು ವಿಶ್ಲೇಷಿಸಿದ್ದಾರೆ. ಆದರೆ ವೈದ್ಯಕೀಯ ನೆರವು ಕಡಿತಗೊಳಿಸುವ ಪ್ರಸ್ತಾವಕ್ಕೆ ಡೆಮಾಕ್ರಟಿಕ್ ಪಾರ್ಟಿ ಹಾಗೂ ರಿಪಬ್ಲಿಕನ್ ಪಾರ್ಟಿಯ ಕೆಲವರಿಂದಲೂ ಟೀಕೆ ವ್ಯಕ್ತವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News