×
Ad

ತುಮಕೂರು | ಟ್ರ್ಯಾಕ್ಟರ್ ಗೆ ಬೈಕ್ ಢಿಕ್ಕಿ: ತಂದೆ-ತಾಯಿ, ಮಗ ಮೃತ್ಯು

Update: 2025-01-07 09:38 IST

ತುಮಕೂರು: ಬೈಕೊಂದು ಮುಂದೆ ಸಾಗುತ್ತಿದ್ದ ಟ್ರ್ಯಾಕ್ಟರ್ ಗೆ ಢಿಕ್ಕಿ ಹೊಡೆದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕಿನಲ್ಲಿದ್ದ ತಂದೆತಾಯಿ ಹಾಗೂ ಓರ್ವ ಪುತ್ರ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ತುಮಕೂರು ತಾಲೂಕಿನ ಓಬಳಾಪುರ ಗೇಟ್ ಬಳಿ ಇಂದು ಮುಂಜಾನೆ ಸಂಭವಿಸಿದೆ.

ಮಧುಗಿರಿ ತಾಲೂಕಿನ ಪುರವರ ಹೋಬಳಿ ಗೊಂದಿಹಳ್ಳಿ ಗ್ರಾಮದ ನಿವಾಸಿ ಶಾಕಿರ್ ಹುಸೇನ್ (48), ಅವರ ಪತ್ನಿ ಮುಮ್ತಾಝ್ (38) ಹಾಗೂ ಪುತ್ರ ಮುಹಮ್ಮದ್ ಆಸಿಫ್(12) ಮೃತಪಟ್ಟವರು.

ಈ ಮೂವರು ಇಂದು ಮುಂಜಾನೆ ಬೈಕಿನಲ್ಲಿ ತುಮಕೂರಿನಿಂದ ತಮ್ಮ ಊರಿಗೆ ತೆರಳುತ್ತಿದ್ದರು ಎನ್ನಲಾಗಿದೆ. ಮುಂಜಾನೆ ಮಂಜು ಬೀಳುತ್ತಿದ್ದುದ್ದರಿಂದ ಮುಂದಿದ್ದ ಟ್ರ್ಯಾಕ್ಟರ್ ಸರಿಯಾಗಿ ಗೋಚರಿಸದೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಬೈಕ್ ಚಲಾಯಿಸುತ್ತಿದ್ದ ಶಾಕಿರ್ ಹುಸೇನ್ ಅವರ ಹೆಲ್ಮೆಟ್ ಹಾರಿ ಟ್ರ್ಯಾಕ್ಟರ್ ಟ್ರಾಲಿಯೊಳಗೆ ಬಿದ್ದಿದೆ.

ಈ ಬಗ್ಗೆ ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳಕ್ಕೆ ಎಸ್ಪಿ ಅಶೋಕ್ ವೆಂಕಟ್, ಡಿವೈಎಸ್ಪಿ ಚಂದ್ರಶೇಖರ್ ಹಾಗೂ ಗ್ರಾಮಾಂತರ ಸಿಪಿಐ ಭೇಟಿ ನೀಡಿ ಪರಿಶೀಲನೆ ನಡೆಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News