×
Ad

ಚಿಕ್ಕನಾಯಕನಹಳ್ಳಿ ತಾಲೂಕು ತಹಶೀಲ್ದಾರ್ ಗೀತಾ ಲೋಕಾಯುಕ್ತ ಬಲೆಗೆ‌

Update: 2024-03-21 12:54 IST

ತುಮಕೂರು: ರೈತರೊಬ್ಬರ ಬಳಿ 3 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟ ಆರೋಪದಲ್ಲಿ ತಹಶೀಲ್ದಾರ್ ಗೀತಾ ಅವರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ.

ಗೋಡೆಕೆರೆ ಗ್ರಾಮದ ರೈತ ಮಲ್ಲಿಕಾರ್ಜುನ್ ಎಂಬವರಿಗೆ ಸೇರಿದ‌ 33 ಗುಂಟೆ ಜಮೀನನನ್ನು ಭೂ ಪರಿವರ್ತನೆ ಮಾಡಿ ಖಾತೆ ಪಹಣಿ ಮಾಡಿಕೊಡಲು ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ .

ಬುಧವಾರ ಬೆಳಗ್ಗೆ 20 ಸಾವಿರ ಹಣ ಪಡೆದಿದ್ದ ತಹಶಿಲ್ದಾರ್ ಗೀತಾ, ಮಿಕ್ಕಿದ ಹಣದಲ್ಲಿ 30 ಸಾವಿರ ರೂ. ಅನ್ನು ಸಂಜೆ  ಸ್ವೀಕರಿಸುವ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.

ತುಮಕೂರು ಲೋಕಾಯುಕ್ತ ಡಿವೈಎಸ್ ಪಿ ರಾಮಕೃಷ್ಣ ಹಾಗೂ ಉಮಾಶಂಕರ್ ನೇತೃತ್ವದಲ್ಲಿ ಕಾರ್ಯಚರಣೆ ನಡೆದಿದೆ.

 



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News