ಕೊರಟಗೆರೆ | ಭೀಕರ ಕೊಲೆ; ರಸ್ತೆಯಲ್ಲಿ ಕತ್ತರಿಸಿದ ದೇಹದ ಭಾಗ ಪತ್ತೆ!
ಕೊರಟಗೆರೆ ಆ.7 : ಮಹಿಳೆಯೊಬ್ಬರನ್ನು ಕೊಲೆ ಮಾಡಿ ಮೃತದೇಹವನ್ನು ತುಂಡು ತಂಡಾಗಿ ಕತ್ತರಿಸಿ ರಸ್ತೆಯುದ್ದಕ್ಕೂ ಎಸೆದು ವಿಕೃತಿ ಮೆರೆದಿರುವ ಘಟನೆ ಕೊರಟಗೆರೆ ತಾಲೂಕಿನಲ್ಲಿ ನಡೆದಿದೆ.
ಮಹಿಳೆಯ ಹತ್ಯೆ ಮಾಡಿದ ನಂತರ ಮೃತದೇಹವನ್ನು ತುಂಡು ತುಂಡಾಗಿ ಬೇರ್ಪಡಿಸಿ ಕೈ ಭಾಗವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಒಂದು ಕಡೆ ಬಿಸಾಡಿದರೆ, ಅದರಿಂದ ಕೇವಲ ಇನ್ನೂಂದು ಕಿ.ಲೋ. ದೂರದಲ್ಲಿಯೇ ಇನ್ನೂಂದು ಕೈ ಪತ್ತೆಯಾಗಿದೆ. ಸ್ವಲ್ಪ ದೊರದಲ್ಲಿಯೇ ಕರುಳನ್ನು ಚೀಲದಲ್ಲಿ ಕಟ್ಟಿ ಎಸೆಯಲಾಗಿದೆ.
ಇನ್ನಷ್ಟು ದೂರದಲ್ಲಿ ದೇಹದ ಮುಂಡದ ಭಾಗವನ್ನು ಛಿದ್ರ ಛಿದ್ರಗೊಳಿಸಿ ಬಿಸಾಡಲಾಗಿದೆ. ಕೈ ಒಂದು ಕಡೆ, ಕರುಳೊ೦ದು ಕಡೆ, ಮುಂಡವೇ ಇನ್ನೂಂದು ಕಡೆ ಪತ್ತೆಯಾಗಿದೆ ಎನ್ನಲಾಗಿದೆ. ಸಿದ್ದರಬೆಟ್ಟದಿಂದ ತೋವಿನಕೆರೆಗೆ ಸಂರ್ಪಕಿಸುವ ರಸ್ತೆ ಬದಿಯಲ್ಲೂ ಕೂಡ ಮೂಟೆ ಕಟ್ಟಿದ ಚೀಲ ಪತ್ತೆಯಾಗಿದ್ದು, ಅದರಲ್ಲಿ ಮಹಿಳೆಯ ಹೊಟ್ಟೆಯ ಭಾಗ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಮೇಲ್ನೋಟಕ್ಕೆ ಇದು ಮಹಿಳೆಯೊಬ್ಬರ ಮೃತದೇಹ ಅನ್ನೋದು ತಿಳಿದುಬಂದಿದ್ದು, ಇದುವರೆಗೂ ರುಂಡ ಮಾತ್ರ ಪತ್ತೆಯಾಗಿಲ್ಲ.
ಘಟನಾ ಸ್ಥಳಕ್ಕೆ ತುಮಕೂರು ಎಸ್ಪಿ ಅಶೊಕ್ ವೆಂಕಟ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.