×
Ad

ಕುಣಿಗಲ್: ಮಾರ್ಕೋನಹಳ್ಳಿ ಜಲಾಶಯ ಹಿನ್ನೀರಿನಲ್ಲಿ ಕೊಚ್ಚಿಹೋದ 6 ಮಂದಿ; ಇಬ್ಬರ ಮೃತದೇಹ ಪತ್ತೆ

ರಜಾದಿನ ಕಳೆಯಲು ಬಂದಿದ್ದ ವೇಳೆ ದುರಂತ

Update: 2025-10-07 20:41 IST

ಕುಣಿಗಲ್: ತಾಲೂಕಿನ ಮಾರ್ಕೋನಹಳ್ಳಿ ಜಲಾಶಯದ ಹಿನ್ನೀರಿನಲ್ಲಿ ಆರು ಮಂದಿ ಕೊಚ್ಚಿಹೋದ ಘಟನೆ ಮಂಗಳವಾರ ನಡೆದಿದೆ. ಇಬ್ಬರ ಮೃತದೇಹ ಪತ್ತೆಯಾಗಿದ್ದು, ನಾಲ್ವರು ನಾಪತ್ತೆಯಾಗಿದ್ದಾರೆ. 

ತುಮಕೂರಿನ ಬಿ.ಜಿ.ಪಾಳ್ಯ ನಿವಾಸಿಗಳಾದ 7 ಮಂದಿ ಕುಣಿಗಲ್ ತಾಲೂಕಿನ ಮಾಗಡಿಪಾಳ್ಯದಲ್ಲಿರುವ ನೆಂಟರ ಮನೆಗೆ ಹೋಗಿದ್ದರು. ಸಂಬಂಧಿಕರ ಮನೆಯಲ್ಲಿ ಊಟ ಮುಗಿಸಿ ಇಂದು ಸಂಜೆ ಮಾರ್ಕೋನಹಳ್ಳಿ ಜಲಾಶಯ ನೋಡಲು 7 ಮಂದಿಯೂ ತೆರಳಿದ್ದರು.

ಮಾರ್ಕೋನಹಳ್ಳಿ ಸೈ ಫೋನ್ ಬಳಿ ಈಜಾಡುತ್ತಿದ್ದಾಗ ನೀರಿನಲ್ಲಿ 7 ಮಂದಿ ಕೊಚ್ಚಿಕೊಂಡು ಹೋಗಿದ್ದಾರೆ. ಈ ಪೈಕಿ ಸಾಝಿಯಾ (32), ಅರ್ಬಿನ್ (30) ಎಂಬವರ ಮೃತದೇಹಗಳು ಪತ್ತೆಯಾಗಿದ್ದು, ತಬಾಸುಮ್ (45), ಶಬಾನ (44), ಮಿಫ್ರಾ (4) ಹಾಗೂ ಮಹಿಮ್ (1) ಎಂಬವರು ಕಣ್ಮರೆಯಾಗಿದ್ದಾರೆ. ಇವರ ಜತೆಗಿದ್ದ ನವಾಝ್ ಎಂಬವರು ಜಲಾಶಯದ ಗಿಡದ ಪೊದೆಯಲ್ಲಿ ಸಿಲುಕಿಕೊಂಡಿದ್ದು, ತಲೆ ಇತರೆ ಭಾಗಗಳಿಗೆ ಗಾಯಗಳಾಗಿದೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News