×
Ad

ತುಮಕೂರು | ಸಿಡಿಲು ಬಡಿದು 20 ಕುರಿಗಳು ಸಾವು

Update: 2024-05-13 17:48 IST

ಹುಳಿಯಾರು : ಸಿಡಿಲು ಬಡಿದು 20 ಕುರಿಗಳು ಸಾವನ್ನಪ್ಪಿದ ಘಟನೆ ಕಂದಿಕೆರೆ ಹೋಬಳಿ ರಾಮನಹಳ್ಳಿ ಗ್ರಾಪಂ ವ್ಯಾಪ್ತಿಯ ಹನುಮಂತನಹಳ್ಳಿಯಲ್ಲಿ ರವಿವಾರ ವರದಿಯಾಗಿದೆ. 

ಹನುಮಂತನಹಳ್ಳಿಯ ಜಯಣ್ಣ ಎಂಬುವವರಿಗೆ ಸೇರಿದ ಕುರಿಗಳು ಸಾವನ್ನಪ್ಪಿವೆ. ಇವರು ಎಂದಿನಂತೆ ತಮ್ಮ 55 ಕುರಿಗಳನ್ನು ಮೇಯಿಸಲು ಊರಿನ ಸಮೀಪದ ಜಮೀನಿಗೆ ಹೋಗಿದ್ದಾರೆ. ಈ ವೇಳೆ ಮಳೆಗಾಳಿ ಆರಂಭವಾಗಿದ್ದು, ಜಮೀನಿನ ಪಕ್ಕದ ರಸ್ತೆ ಬದಿಯಲ್ಲಿದ ಹುಣಸೆಮರಗಳ ಕೆಳಗೆ ಕುರಿಗಳನ್ನು ಸೇರಿಸಿ  ನಿಂತಿದ್ದ ಸಂದರ್ಭದಲ್ಲಿ ಜಯಣ್ಣ ಅವರಿಂದ 20 ಅಡಿ ದೂರದಲ್ಲಿ ನಿಂತಿದ್ದ ಒಂದು ಕುರಿ ಹಿಂಡಿಗೆ ಸಿಡಿಲು ಬಡಿದಿದೆ. ಪರಿಣಾಮ 20 ಕುರಿಗಳೂ ಸಾವನ್ನಪ್ಪಿದ್ದು ಮತ್ತೊಂದು ಮರದ ಕೆಳಗೆ ನಿಂತಿದ್ದ ಜಯಣ್ಣ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ತಿಮ್ಮನಹಳ್ಳಿ ಪಶು ಆಸ್ಪತ್ರೆಯ ಡಾ.ಶಾಂತೇಶ್ ಹಾಗೂ ಚಿಕ್ಕನಾಯಕನಹಳ್ಳಿ ಪಿಎಸ್‍ಐ ತ್ಯಾಗರಾಜು ಭೇಟಿ ನೀಡಿ ಘಟನೆಯ ಮಾಹಿತಿ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News