ತುಮಕೂರು | ಸಮೀಕ್ಷೆಗೆ ಹೋದ ಮುಸ್ಲಿಂ ಶಿಕ್ಷಕಿಗೆ ಅವಾಚ್ಯ ಶಬ್ದಗಳಿಂದ ನಿಂದನೆ; ಆರೋಪ
Update: 2025-10-04 13:11 IST
ಸಾಂದರ್ಭಿಕ ಚಿತ್ರ
ತುಮಕೂರು : ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಹೋದ ಮುಸ್ಲಿಂ ಸಮುದಾಯದ ಶಿಕ್ಷಕಿಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹೊರೆಗೆ ಕಳುಹಿಸಿರುವ ಘಟನೆ ತುಮಕೂರು ನಗರದ ಭೀಮಸಂದ್ರ ಗ್ರಾಮದಲ್ಲಿ ನಡೆದಿದೆ.
ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ನಡೆಸುತ್ತಿರುವ ಸಾಮಾಜಿಕ, ಅರ್ಥಿಕ, ಶೈಕ್ಷಣಿಕ ಗಣತಿಗೆ ನೇಮಕವಾಗಿದ್ದ ರೇಷ್ಮಾ ಎಂಬ ಶಿಕ್ಷಕಿ ತಮಗೆ ನಿಗದಿಪಡಿಸಿದ್ದ ಭೀಮಸಂದ್ರ ಗ್ರಾಮದಲ್ಲಿ ಸಮೀಕ್ಷೆಗೆ ಹೋದಂತಹ ಸಂದರ್ಭದಲ್ಲಿ ʼಹಿಂದೂಗಳ ಮನೆಗೆ ನೀವು ಏಕೆ ಬಂದಿದ್ದೀರಾ, ನಿಮ್ಮ ಐಡಿ ಕಾರ್ಡ್ ತೋರಿಸಿʼ ಎಂದು ಗದರಿದ್ದಲ್ಲದೆ, ನಮ್ಮನ್ನು ನಿಮ್ಮ ಜಾತಿಗೆ ಸೇರಿಸಲು ಬಂದಿದ್ದೀರಾ ಎಂದು ಸಾರ್ವಜನಿಕವಾಗಿ ಅಪಮಾನ ಮಾಡಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.