×
Ad

ತುಮಕೂರು: ಬೇಕರಿಯಲ್ಲಿ ಬೆಂಕಿ ಆಕಸ್ಮಿಕ; ಅಪಾರ ನಷ್ಟ

Update: 2024-05-20 11:08 IST

ತುಮಕೂರು: ನಾಗವಲ್ಲಿಯ ಎಂ.ಜಿ ರಸ್ತೆಯಲ್ಲಿರುವ ಬೇಕರಿಯೊಂದಕ್ಕೆ ಬೆಂಕಿ ಹೊತ್ತಿಕೊಂಡು ಅಪಾರ ಪ್ರಮಾಣದ ನಾಶ-ನಷ್ಟವುಂಟಾಗಿರುವ ಘಟನೆ ರವಿವಾರ ತಡರಾತ್ರಿ ನಡೆದಿರುವ ಬಗ್ಗೆ ವರದಿಯಾಗಿದೆ.

ಹಾಸನ ಮೂಲದ ಅಭಿಷೇಕ್ ಎಂಬವರ ಒಡೆತನದ ಬೇಕರಿ ಇದಾಗಿದ್ದು, ಬೆಂಕಿ ಕಾಣಿಸಿಕೊಂಡ ಕೂಡಲೇ ಸ್ಥಳೀಯರು ಸೇರಿ ನಂದಿಸಿದ್ದಾರೆ ಎನ್ನಲಾಗಿದ್ದು, ಅಗ್ನಿಶಾಮಕ ದಳದ ವಾಹನ ಬರುವ ಹೊತ್ತಿಗೆ ಸುಮಾರು 12 ಲಕ್ಷ ರೂ, ಮೌಲ್ಯದ ಸೊತ್ತುಗಳು ಹಾನಿಗೀಡಾಗಿವೆ. ಬೇಕರಿಯ ಒಳಗಿದ್ದ ಗ್ಯಾಸ್ ಸಿಲಿಂಡರನ್ನು ಸಾರ್ವಜನಿಕರು ಹೊರ ತೆಗೆದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಅಥವಾ ಉದ್ದೇಶ ಪೂರ್ವಕವಾಗಿ ಕೃತ್ಯ ನಡೆಸಲಾಗಿದೆ ಎಂದು ಬೇಕರಿ ಮಾಲೀಕ ಅಳಲು ತೋಡಿಕೊಂಡಿದ್ದಾರೆ.

ಈ ಬಗ್ಗೆ ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News