×
Ad

ತುಮಕೂರು | ಬಸ್ಸಿನಲ್ಲಿ ಶೌಚಾಲಯಕ್ಕೆ ಬಳಸುವ ಆ್ಯಸಿಡ್ ಬಾಟಲ್ ಸಿಡಿದು ಹಲವರಿಗೆ ಗಾಯ

Update: 2024-03-20 20:47 IST

ತುಮಕೂರು: ಮಹಿಳೆಯೊಬ್ಬರು ಮನೆಯ ಶೌಚಾಲಯ ಸ್ವಚ್ಚಗೊಳಿಸಲು ಬಸ್‍ನಲ್ಲಿ ಆ್ಯಸಿಡ್ ಬಾಟಲ್ ತೆಗೆದುಕೊಂಡು ಹೋಗುವ ಸದು ಸಿಡಿದು ಐದಾರು ಮಂದಿ ಗಾಯಗೊಂಡಿರುವ ಘಟನೆ ಬುಧವಾರ ಸಂಜೆ ಗೂಳೂರು ಸಮೀಪದ ಪೋದಾರ್ ಶಾಲೆಯ ಬಳಿ ನಡೆದಿದೆ.

ನಗರದ ಮರಳೂರು ದಿಣ್ಣೆಯ ಜನತಾ ಕಾಲೋನಿಯಲ್ಲಿ ವಾಸವಾಗಿರುವ ಮಹಿಳೆಯೊಬ್ಬರು, ಕುಣಿಗಲ್ ನಿಂದ ತುಮಕೂರಿಗೆ ಬರುವ ಖಾಸಗಿ ಬಸ್ ಹತ್ತಿದ್ದು, ಅವರ ಬಳಿ ಇದ್ದ ಬ್ಯಾಗನ್ನು  ಡ್ರೈವರ್ ಸೀಟಿನ ಹಿಂಬದಿಯಲ್ಲಿ ಇಟ್ಟು ಅಲ್ಲೇ ಕುಳಿತಿದ್ದರು. ಆದರೆ ಬ್ಯಾಗಿನಲ್ಲಿ ಇರಿಸಿದ್ದ ಆ್ಯಸಿಡ್ ಇದ್ದ ಬಾಟಲಿ ಸಿಡಿದು ಆಕೆಯ ಅಕ್ಕಪಕ್ಕ ಕುಳಿತಿದ್ದ ಐದಾರು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್.ವಿ., ನಗರ ಡಿವೈಎಸ್ಪಿ ಚಂದ್ರಶೇಖರ್,ಗ್ರಾಮಾಂತರ ಇನ್ಸ್‌  ಪೆಕ್ಟರ್ ಮೋಹನ್ ಅವರುಗಳು ಸ್ಥಳಕ್ಕೆ ಭೇಟಿ ನೀಡ ಪರಿಶೀಲನೆ ನಡೆಸಿರುವುದಲ್ಲದೆ, ಗಾಯಾಳು ಚಿಕಿತ್ಸೆ ಪಡೆಯುತ್ತಿರುವ ಸರಕಾರಿ ಆಸ್ಪತ್ರೆಗೂ ಭೇಟಿ ನೀಡಿ ಗಾಯಾಳುಗಳಿಂದ ಘಟನೆ ಕುರಿತು ಮಾಹಿತಿ ಪಡೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News