×
Ad

ತುಮಕೂರು | ಬಿಜೆಪಿ ಅಭ್ಯರ್ಥಿ ವಿ‌.ಸೋಮಣ್ಣ ಪರ ರೋಡ್ ಶೋ ವೇಳೆ ಜೆಡಿಎಸ್ ಮುಖಂಡರ ನಡುವೆ ಗಲಾಟೆ

Update: 2024-04-13 20:26 IST

ತುಮಕೂರು : ತುಮಕೂರು ಲೋಕಸಭಾ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿ ವಿ‌.ಸೋಮಣ್ಣ ಪರ ರೋಡ್ ಶೋ ವೇಳೆ ತಿಪಟೂರು ತಾಲೂಕಿನ ಜೆಡಿಎಸ್ ಘಟಕಗಳ ಮುಖಂಡರ ನಡುವೆ ಗಲಾಟೆ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು, ಗಲಾಟೆ ನಿಯಂತ್ರಣಕ್ಕೆ ಪೊಲೀಸರು ಹರಸಾಹಸಪಟ್ಟ ಘಟನೆ ಶನಿವಾರ ನೊಣವಿನಕೆರೆಯಲ್ಲಿ ನಡೆದಿದೆ.

ಇಂದು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಪರ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಜಿಲ್ಲೆಯ ತಿಪಟೂರು, ನೊಣವಿನಕೆರೆ, ತುರುವೇಕೆರೆ, ಹೆಬ್ಬೂರು ಮುಂತಾದ ಕಡೆಗಳಲ್ಲಿ ರೋಡ್ ಶೋ ನಡೆಸುವ ಕಾರ್ಯಕ್ರಮವಿತ್ತು. ನೊಣವಿಕೆರೆಯಲ್ಲಿ ರೋಡ್ ಶೋ ನಡೆಸುವ ವೇಳೆ ಜೆಡಿಎಸ್ ಮುಖಂಡರುಗಳಾದ ರಾಕೇಶಗೌಡ ಮತ್ತು ಕೆ.ಟಿ.ಶಾಂತಕುಮಾರ್ ಮುಖಂಡರ ನಡುವೆ ಮಾತಿನ ಚಕಮುಖಿ ಆರಂಭವಾಗಿ ತಾರಕಕ್ಕೆ ಹೋಗಿ, ಕೈ ಕೈ ಮಿಲಾಯಿಸುವ ಹಂತ ತಲುಪಿತ್ತು. ಈ ಎರಡು ಬಣಗಳ ನಡುವಿನ ಗಲಾಟೆ ಶಮನಗೊಳಿಸಲು ಪೊಲೀಸರು ಹರಸಹಾಸ ಪಟ್ಟರು. ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಪ್ರಚಾರ ವಾಹನದಲ್ಲಿದ್ದ ವಿ.ಸೋಮಣ್ಣ ಅವರೇ ವಾಹನ ಇಳಿದು ಇಬ್ಬರನ್ನೂ ಸಮಾಧಾನ ಪಡಿಸಿದರು.

ಸ್ಥಳೀಯರಾಗಿರುವ ರಾಕೇಶ್ ಗೌಡ ಅವರನ್ನು ಬಿಟ್ಟು ,ಕೆ.ಟಿ.ಶಾಂತಕುಮಾರ್ ಅವರಿಗೆ ಆದ್ಯತೆ ನೀಡುತ್ತಿದ್ದಾರೆ ಎಂಬ ವಿಚಾರವಾಗಿ ಎರಡು ಬಣಗಳ ನಡುವೆ ಗಲಾಟೆ ಆರಂಭವಾಗಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News