×
Ad

ತುಮಕೂರು | ಮಲಗಿದ್ದ ವ್ಯಕ್ತಿಯ ತಲೆ ಮೇಲೆ ಇಟ್ಟಿಗೆ ಎತ್ತಿಹಾಕಿ ಕೊಲೆ

Update: 2024-08-12 13:07 IST

ತುಮಕೂರು, ಆ.12: ಮಲಗಿದ್ದ ವ್ಯಕ್ತಿಯೋರ್ವನ ತಲೆ ಮೇಲೆ ಹಾಲೋ ಬ್ಲಾಕ್ ಇಟ್ಟಿಗೆ ಎತ್ತಿ ಹಾಕಿ ಕೊಲೆಗೈದಿರುವ ಘಟನೆ ಕುಣಿಗಲ್ ಪಟ್ಟಣದ ಕೆ.ಆರ್.ಎಸ್ ಅಗ್ರಹಾರದಲ್ಲಿ ರವಿವಾರ ರಾತ್ರಿ ನಡೆದಿದೆ.

ತಾಲೂಕಿನ ಹುಲಿಯೂರುದುರ್ಗ ಹೋಬಳಿ ಅಂಗರಹಳ್ಳಿ ಗ್ರಾಮ ಹಾಲಿ ತಾಲೂಕಿನ ಕೊತ್ತಗೆರೆ ಹೋಬಳಿ ಬಾಗೇನಹಳ್ಳಿ ನಿವಾಸಿ ರವಿ (40) ಕೊಲೆಯಾದವರು. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಶಿವಕುಮಾರ್ ಕೊಲೆ ಆರೋಪಿ.

ಇವರಿಬ್ಬರು ಸ್ನೇಹಿತರಾಗಿದ್ದು, ಒಂದೇ ಕಡೆ ಗಾರೆ ಕೆಲಸ ಮಾಡುತ್ತಿದ್ದರು. ರವಿವಾರ ಸಂಜೆ ಕೆಲಸ ಮುಗಿಸಿ ರವಿ ತನ್ನ ಮನೆಗೆ ಹೋಗದೆ ಶಿವಕುಮಾರ್ ಶೆಡ್ ಗೆ ಹೋಗಿದ್ದಾನೆ.

ಇಂದು ಬೆಳಗ್ಗೆ ಕೃತ್ಯ ಬೆಳಕಿಗೆ ಬಂದಿದ್ದು, ರವಿ ಶೆಡ್ ನಲ್ಲಿ ಮಲಗಿದ್ದ ಸ್ಥಿತಿಯಲ್ಲಿ ಕೊಲೆಯಾಗಿದ್ದರು. ಆರೋಪಿ ಶಿವಕುಮಾರ್ ತಲೆಮರೆಸಿಕೊಂಡಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News