×
Ad

ತುಮಕೂರು: ಪದವಿ ಸ್ವೀಕರಿಸಿ ಮನೆಗೆ ಹಿಂತಿರುಗುವ ವೇಳೆ ಹಾವು ಕಚ್ಚಿ ವೈದ್ಯಕೀಯ ವಿದ್ಯಾರ್ಥಿನಿ ಸಾವು

Update: 2023-12-01 15:30 IST

ಸಾಂದರ್ಭಿಕ ಚಿತ್ರ (Credit:mid-day.com)

ತುಮಕೂರು:​ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಘಟಿಕೋತ್ಸವದಲ್ಲಿ ವೈದ್ಯಕೀಯ ಪದವಿ ಪ್ರಮಾಣ ಪತ್ರ ಪಡೆದು ಮನೆ ಹಿಂತಿರುಗಿದ ವಿದ್ಯಾರ್ಥಿನಿ ಹಾವು ಕಚ್ಚಿ ಮೃತಪಟ್ಟಿರುವ ಘಟನೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಕೇರಳ ಮೂಲ ಆದಿತ್ ಬಾಲಕೃಷ್ಣನ್ ಮೃತ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದು, ಸಿದ್ಧಾರ್ಥ ವಿಶ್ವವಿದ್ಯಾಯಲದ ಘಟಿಕೋತ್ಸ ಕಾರ್ಯಕ್ರಮದಲ್ಲಿ ಪದವಿ ಸ್ವೀಕರಿಸಿ ಹೆಗ್ಗರೆಯಲ್ಲಿರುವ ತಮ್ಮ ಮನೆಗೆ ಬಂದು  ಕಾರು ನಿಲ್ಲಿಸುವ ಸಮಯದಲ್ಲಿ ಹಾವುವೊಂದು ಕಚ್ಚಿದೆ. ಇದನ್ನುಅವರು ಗಮನಿಸಿದೇ ಮನಗೆ ತೆರಳಿದ್ದು, ಸ್ವಲ್ಪ ಸಮಯದ ಬಳಿಕ ಕುಸಿದುಬಿದ್ದು ಮೃತಪಟ್ಟಿದ್ದಾರೆ. 

ವಿದ್ಯಾರ್ಥಿನಿಯ ಮೃತದೇಹವನ್ನು ಸಿದ್ದಾರ್ಥ ಮೆಡಿಕಲ್ ಕಾಲೇಜಿಗೆ ರವಾನಿಸಲಾಗಿದ್ದು, ಹಾವು ಕಡಿತದಿಂದ ಮೃತಪಟ್ಟಿದನ್ನು ವೈದ್ಯರು ದೃಢಪಡಿಸಿದ್ದಾರೆ.  ಈ ಬಗ್ಗೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News