ತುಮಕೂರು | ಕತ್ತರಿಸಿದ ರೀತಿಯಲ್ಲಿ ಮನುಷ್ಯನ ಎರಡು ಕೈಗಳು ಪತ್ತೆ!
Update: 2025-08-07 13:42 IST
ತುಮಕೂರು : ಕತ್ತರಿಸಿದ ರೀತಿಯಲ್ಲಿ ಮನುಷ್ಯನ ಎರಡು ಕೈಗಳು ಪತ್ತೆಯಾಗಿರುವ ಘಟನೆ ಕೊರಟಗೆರೆ ತಾಲ್ಲೂಕಿನ ಚಿಂಪುಗಾನಹಳ್ಳಿ ಗ್ರಾಮ ಹೊರವಲಯದಲ್ಲಿ ನಡೆದಿದೆ.
ಚಿಂಪುಗಾನಹಳ್ಳಿ ಹೊರವಲಯದ ಮುತ್ಯಾಲಮ್ಮ ದೇವಾಲಯದ ಬಳಿ ಒಂದು ಕೈ ಪತ್ತೆಯಾಗಿದ್ದರೆ, ಆ ಜಾಗದಿಂದ ಸುಮಾರು 1 ಕಿ.ಮಿ ದೂರದಲ್ಲಿ ಮತ್ತೊಂದು ಕೈ ಪತ್ತೆಯಾಗಿದೆ.
ರಸ್ತೆ ಬದಿಯಲ್ಲೇ ಕವರ್‌ನಲ್ಲಿ ಸುತ್ತಿ ಬಿಸಾಕಿರುವ ಸ್ಥಿತಿಯಲ್ಲಿ ಕೈಗಳು ಪತ್ತೆಯಾಗಿದೆ. ಕೊಲೆ ಮಾಡಿ ಕೈ ಕತ್ತರಿಸಿ ಬಿಸಾಕಿರುವ ಶಂಕೆ ವ್ಯಕ್ತವಾಗಿದೆ. ಎರಡು ಕೈ ಹೊರತುಪಡಿಸಿ ಯಾವುದೇ ಮೃತದೇಹ ಪತ್ತೆಯಾಗಿಲ್ಲ.
ಸ್ಥಳಕ್ಕೆ ಕೊರಟಗೆರೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.