×
Ad

ತುರುವೇಕೆರೆ | ಬೇಲಿ ಮೇಲೆ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಮೃತ್ಯು

Update: 2025-05-07 15:59 IST
  • ಸಾಂದರ್ಭಿಕ ಚಿತ್ರ | PC : freepik.com 

ತುಮಕೂರು : ತಂತಿ ಬೇಲಿಯ ಮೇಲೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ ಅಲ್ಲೇ ಆಟವಾಡುತ್ತಿದ್ದ ನಾಲ್ಕು ವರ್ಷದ ಬಾಲಕನೊಬ್ಬ ತಂತಿಯನ್ನು ಮುಟ್ಟಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸಮೀಪದ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕು ದೊಡ್ಡಗೊರಾಘಟ್ಟ ಗ್ರಾಮದಲ್ಲಿ ನಡೆದಿದೆ.

ತುರುವೇಕೆರೆ ತಾಲ್ಲೂಕಿನ ದೊಡ್ಡಗೊರಾಘಟ್ಟದ ನಿವಾಸಿ ಚಂದನ್ ಶೆಟ್ಟಿ ಅವರ ಪುತ್ರ ಪೋಷಿತ್ ಶೆಟ್ಟಿ(4) ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟ ಬಾಲಕ.

ಪೋಷಿತ್ ಶೆಟ್ಟಿ ತನ್ನ ಮನೆಯ ಮುಂಭಾಗದಲ್ಲಿ ಆಟವಾಡುವ ವೇಳೆ ಮನೆಗೆ ಹೊಂದಿಕೊಂಡಿರುವ ತೋಟಕ್ಕೆ ಹಾಕಲಾಗಿದ್ದ ತಂತಿ ಬೇಲಿಯ ಮೇಲೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು ಎಂದು ಹೇಳಲಾಗಿದೆ. ಈ ಸಂದರ್ಭದಲ್ಲಿ ಬಾಲಕ ತಿಳಿಯದೇ ತಂತಿ ಬೇಲಿಯನ್ನು ಮುಟ್ಟಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ ತಿಳಿದುಬಂದಿದೆ.

ಘಟನೆ ನಡೆದ ಸ್ಥಳಕ್ಕೆ ಸಿಪಿಐ ಲೋಹಿತ್ ಕುಮಾರ್, ದಂಡಿನಶಿವರ ಪೋಲಿಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮೂರ್ತಿ, ಬೆಸ್ಕಾಂನ ಎಇಇ ಎನ್.ಸಿ.ರಾಜಶೇಖರ್, ಶಾಖಾಧಿಕಾರಿ ಜಾನ್ ಮಧುಕರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News