×
Ad

ಧರ್ಮ, ಭಾವನೆಗಳ ಮೇಲೆ ಬಿಜೆಪಿ ರಾಜಕಾರಣ: ಉಡುಪಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್

Update: 2025-08-30 18:39 IST

ಉಡುಪಿ: ಜೆಡಿಎಸ್, ಬಿಜೆಪಿಗೆ ಬೇರೆ ವೃತ್ತಿ ಇಲ್ಲ.. ಎರಡೂ ಪಕ್ಷಗಳು ಬದುಕಿನ ಬಗ್ಗೆ ನೋಡಲ್ಲ. ಅವರು ಭಾವನೆ ಮೇಲೆ ಧರ್ಮದ ಮೇಲೆ ರಾಜಕಾರಣ ಮಾಡುತ್ತಿದ್ದಾರೆ ಎಂದು ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಉಡುಪಿ ಶ್ರೀ ಕೃಷ್ಣಮಠದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿದ ಡಿಕೆಶಿ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.

ಮೈಸೂರು ದಸರಾ- ರಾಜಮಾತೆ ಹೇಳಿಕೆ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ನೀಡದೆ ಡಿಕೆ ಶಿವಕುಮಾರ್ ತೆರಳಿದರು.

ಉಡುಪಿಗೆ , ಶ್ರೀಕೃಷ್ಣ ಮಠಕ್ಕೆ ಬಂದಿರುವುದರಲ್ಲಿ ವಿಶೇಷವೇನಿಲ್ಲ. ಕೃಷ್ಣಮಠದಿಂದ ಈ ಹಿಂದೆಯೇ ಆಹ್ವಾನ ಇತ್ತು. ಈ ಸರಕಾರ ಬಂದ ಮೇಲೆ ಬಹಳ ‌ಸಮಯದಿಂದ ಆಹ್ವಾನ ಮಾಡುತ್ತಿದ್ದರು. ಆದರೆ ಕೃಷ್ಣಮಠಕ್ಕೆ ಬರಲು ಸಾಧ್ಯವಾಗಿರಲಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News