×
Ad

ಮುದರಂಗಡಿ ರಾಜಾಪುರ ಸಾರಸ್ವತ ಸಂಘದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ

Update: 2025-08-31 21:43 IST

ಶಿರ್ವ, ಆ.31: ಶಿರ್ವ ಸಮೀಪದ ರಾಜಾಪುರ ಸಾರಸ್ವತ ಸಂಘ ಮುದರಂಗಡಿ ಇದರ ನೂತನ ಕಟ್ಟಡಕ್ಕೆ ರವಿವಾರ ಶಂಕುಸ್ಥಾಪನೆಯನ್ನು ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೆಶ್ವರೀ ದೇವಳದ ಅರ್ಚಕ ಶ್ರೀಕಾಂತ್ ಭಟ್ ನೇತೃತ್ವದಲ್ಲಿ ನೆರವೇರಿಸಲಾಯಿತು.

ಸ್ಥಳದಾನಿಗಳು, ಹಿರಿಯ ಜ್ಯೋತಿಷಿ ವೈ.ಉಪೇಂದ್ರ ಪ್ರಭು ಮಾಣ್ಯೂರು, ಹಿರಿಯರಾದ ಸದಾಶಿವ ಪ್ರಭು ಇವರ ಉಪಸ್ಥಿತಿಯಲ್ಲಿ ಸಂಘದ ಅಧ್ಯಕ್ಷ ಲಕ್ಷ್ಮಣ ನಾಯಕ್ ದಂಪತಿ ಧಾರ್ಮಿಕ ವಿಧಿಯಲ್ಲಿ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಸಂಘದ ಕಾರ್ಯಾಲಯದಲ್ಲಿ ದುರ್ಗಾಹೋಮ ಧಾರ್ಮಿಕ ಅನುಷ್ಠಾನ ಜರುಗಿತು.

ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ಅನುಕೂಲವಾಗುವಂತೆ ಸಂಘದ ಸ್ಥಾಪಕ ಅಧ್ಯಕ್ಷ, ಪ್ರಸ್ತುತ ಗೌರವ ಅಧ್ಯಕ್ಷ ವೈ.ಉಪೇಂದ್ರ ಪ್ರಭುಗಳು 35 ಸೆಂಟ್ಸ್ ಸ್ಥಳವನ್ನು ದಾನವಾಗಿ ನೀಡಿದ್ದಲ್ಲದೆ ಕಟಡ್ಟದ ನಿರ್ಮಾಣದ ಭಾಗವಾಗಿ ದೊಡ್ಡಮಟ್ಟದ ದೇಣಿಗೆಯನ್ನೂ ಪ್ರಕಟಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ದೇವದಾಸ್ ಪಾಟ್ಕರ್, ಕೇಶವ ನಾಯಕ್, ಕಾರ್ಯದರ್ಶಿ ಜ್ಯೋತಿ ಪ್ರಭು, ಖಜಾಂಚಿ ಸುಧೀರ್ ಪ್ರಭು, ಸಾಂತೂರು, ಭರಣಿ, ಕಾಂಜಾರಕಟ್ಟೆ, ಆತ್ರಾಡಿ, ಪಿಲಾರು, ಎಲ್ಲೂರು ಭಾಗಗಳ ಸಮಾಜ ಬಾಂಧವರು ಉಪಸ್ಥಿತರಿದ್ದರು. ದೇವದಾಸ್ ಪಾಟ್ಕರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News