×
Ad

ಹೂಡೆ ಸಾಲಿಹಾತ್ ಬಾಲಕರ ಪುಟ್ಬಾಲ್ ತಂಡ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ

Update: 2025-09-02 21:59 IST

ಉಡುಪಿ, ಸೆ.2: ಇತ್ತೀಚೆಗೆ ಕಾರ್ಕಳದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ 17ರ ವಯೋಮಿತಿಯ ಬಾಲಕರ ಪುಟ್ಬಾಲ್ ಪಂದ್ಯಕೂಟದಲ್ಲಿ ಬ್ರಹ್ಮಾವರ ಶೈಕ್ಷಣಿಕ ವಲಯದ ನೇತೃತ್ವ ವಹಿಸಿದ್ದ ಹೂಡೆಯ ಸಾಲಿಹಾತ್ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ಬಾಲಕರ ತಂಡ ಗೆದ್ದು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ.

ಮಂಡ್ಯದಲ್ಲಿ ನಡೆಯುವ ವಿಭಾಗ ಮಟ್ಟದ ಪುಟ್ಬಾಲ್ ಪಂದ್ಯ ಕೂಟದಲ್ಲಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಲಿದೆ. ಪಂದ್ಯ ಜಯಗಳಿಸಲು ಶ್ರಮಿಸಿದ ಎಲ್ಲಾ ಆಟಗಾರರಿಗೆ ಶಾಲಾ ದೈಹಿಕ ಶಿಕ್ಷಕಿ ಮಮತಾ, ಮುಖ್ಯ ಶಿಕ್ಷಕಿ ಸುನಂದಾ ಹಾಗೂ ಸಾಲಿಹಾತ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಇಸ್ಮಾಯಿಲ್ ಸಾಹೇಬ್ ಅಭಿನಂಧನೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News