×
Ad

ಎಆರ್‌ಎಸ್ಸೈ ಶಂಕರ್‌ಗೆ ರಾಷ್ಟ್ರಪತಿ ಪದಕದ ಗೌರವ

Update: 2025-09-02 22:00 IST

ಉಡುಪಿ, ಸೆ.2: ಡಿ.ಎ.ಆರ್.ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎ.ಆರ್. ಎಸ್.ಐ. ಶಂಕರ್ ರಾಷ್ಟ್ರಪತಿ ಪದಕದ ಗೌರವಕ್ಕೆ ಪಾತ್ರರಾಗಿದ್ದಾರೆ.

ಆ.30ರಂದು ಬೆಂಗಳೂರಿನ ರಾಜ ಭವನದಲ್ಲಿ ನಡೆದ ರಾಷ್ಟ್ರಪತಿ ಪದಕ ಪ್ರದಾನ ಸಮಾರಂಭದಲ್ಲಿ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಪದಕ ಪ್ರದಾನ ಮಾಡಿದರು. ಶಂಕರ್ ಕರ್ತವ್ಯದ ಜೊತೆಯಲ್ಲಿ ಕ್ರೀಡಾಭ್ಯಾಸದಲ್ಲಿ ತೊಡಗಿಕೊಂಡು ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿ ಈವರೆಗೆ 57 ಪದಕಗಳನ್ನು ಪಡೆದಿದ್ದಾರೆ.

26 ವರ್ಷಗಳ ಪೊಲೀಸ್ ಇಲಾಖೆಯ ಸೇವೆ ಮತ್ತು ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಗಾಗಿ ರಾಷ್ಟ್ರಪತಿಗಳು 2023ನೇ ಸಾಲಿನ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಸಂದರ್ಭದಲ್ಲಿ ಶ್ಲಾಘನೀಯ ಸೇವಾ ಪದಕವನ್ನು ನೀಡಿ ಗೌರವಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News