×
Ad

ಬ್ಯಾಂಕ್ ಖಾತೆಯಿಂದ ಹಣ ವಂಚನೆ ಆರೋಪ: ಪ್ರಕರಣ ದಾಖಲು

Update: 2025-09-04 21:01 IST

ಶಿರ್ವ, ಸೆ.4: ಖಾತೆದಾರರಿಗೆ ಅರಿವಿಲ್ಲದೇ ಅವರ ಬ್ಯಾಂಕ್ ಖಾತೆಯಲ್ಲಿದ್ದ ಸಾವಿರಾರು ರೂ. ಹಣ ಬೇರೆ ಖಾತೆಗೆ ವರ್ಗಾವಣೆ ಮಾಡಿ ವಂಚಿಸುರುವ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂಟೋನಿ ರಿಚರ್ಡ್ ವಾಜ್(54) ಎಂಬವರ ವಾಟ್ಸಾಪ್‌ಗೆ ಲಿಂಕ್ ಪೈಲ್ ಮೆಸೇಜ್ ಬಂದಿದ್ದು, ಆದರೆ ಆ ಲಿಂಕ್ ಅಂಟೋನಿಗೆ ಅರಿವಿಲ್ಲದೇ ಡೌನ್ ಲೋಡ್ ಆಗಿತ್ತು. ಇದನ್ನು ಗಮನಿಸಿದ ಅವರು ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ ಅವರ ಎರಡು ಬ್ಯಾಂಕ್ ಖಾತೆಗಳಿಂದ ಒಟ್ಟು 79,500ರೂ. ಹಣ ಬೇರೆಯವರ ಖಾತೆಗೆ ವರ್ಗಾವಣೆ ಆಗಿರುವುದು ಕಂಡುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News