ನರ್ಸಿಂಗ್ ವಿದ್ಯಾರ್ಥಿಗಳಿಗೆ ಆಟಿಸಂ ಸ್ಪೆಕ್ಟ್ರಮ್ ಕುರಿತು ಕಾರ್ಯಾಗಾರ
ಉಡುಪಿ, ಸೆ.6: ಆಟಿಸಂ ಸೊಸೈಟಿ ಆಫ್ ಉಡುಪಿ, ರೋಟರಿ ಕ್ಲಬ್ ಮಣಿಪಾಲ, ಡಾ.ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ, ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬೈ, ಮಣಿಪಾಲದ ಆಶ್ರಿತ್ ಕಾಲೇಜ್ ಆಫ್ ನರ್ಸಿಂಗ್ ಹಾಗೂ ಮಣಿಪಾಲದ ಆರೋಗ್ಯ ವೃತ್ತಿಪರ ಕಾಲೇಜುಗಳ ಸಹಯೋಗದೊಂದಿಗೆ ನರ್ಸಿಂಗ್ ವಿದ್ಯಾರ್ಥಿ ಗಳಿಗಾಗಿ ಆಟಿಸಂ ಸ್ಪೆಕ್ಟ್ರಮ್ ಅಸ್ವಸ್ಥತೆಗಳ ಕುರಿತು ಕಾರ್ಯಾಗಾರವೊಂದು ಶನಿವಾರ ಉಡುಪಿ ದೊಡ್ಡಣಗುಡ್ಡೆ ಯಲ್ಲಿರುವ ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ಕಮಲ್ ಎ ಬಾಳಿಗಾ ಸಭಾಂಗಣದಲ್ಲಿ ನಡೆಯಿತು.
ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ನಿರ್ದೇಶಕ ಡಾ. ಪಿ.ವಿ. ಭಂಡಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಆಟಿಸಂ ಕುರಿತಂತೆ ವಿವರಿಸಿದರಲ್ಲದೇ, ಅವುಗಳ ನಿಯಂತ್ರಣದಲ್ಲಿ ಇಂತಹ ಜಾಗ್ರತಿ ಕಾರ್ಯಕ್ರಮಗಳ ಅವಶ್ಯಕತೆ ಕುರಿತು ಮಾತನಾಡಿದರು.
ರೋಟರಿ ಕ್ಲಬ್ ಮಣಿಪಾಲ ಅಧ್ಯಕ್ಷೆ ಶಶಿಕಲಾ ರಾಜವರ್ಮ ಮತ್ತು ಮೆಲ್ವಿನ್ ಅತಿಥಿಗಳಾಗಿ ಉಪಸ್ಥಿತರಿದ್ದರು. ಡಾ. ಸುಪ್ರಿಯಾ, ಡಾ. ಸುನಿಲ ಜಾನ್, ಕೇಶವ್‌ರಾಮ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಮಣಿಪಾಲ ಆಕ್ಯುಪೇಶನಲ್ ಥೆರಪಿ ವಿದ್ಯಾರ್ಥಿಗಳಿಂದ ಆಟಿಸಂ ಕುರಿತು ಕಿರು ನಾಟಕ ಪ್ರದರ್ಶಿಸಲ್ಪಟ್ಟಿತು.
ಉಡುಪಿಯ ಆಟಿಸಂ ಸೊಸೈಟಿಯ ಅಧ್ಯಕ್ಷ ಡಾ. ವಿರೂಪಾಕ್ಷ ದೇವರಮನೆ ಸ್ವಾಗತಿಸಿದರು. ಸಫಾನ್ ಕಾರ್ಯಕ್ರಮ ನಿರೂಪಿಸಿ ಕೀರ್ತೇಶ್ ವಂದಿಸಿದರು.