ನದಿಗೆ ಬಿದ್ದು ಕೇರಳದ ವ್ಯಕ್ತಿ ಮೃತ್ಯು
Update: 2025-09-12 21:57 IST
ಮಲ್ಪೆ, ಸೆ.12: ಕಲ್ಯಾಣಪುರ ಕಳವಿನ ಬಾಗಿಲು ಶ್ರೀಮಹಾ ವಿಠೋಬ ರುಖುಮಾಯಿ ಭಜನಾ ಮಂದಿರದ ಬಳಿ ಸ್ವರ್ಣ ನದಿಯ ದಡದ ವ್ಯಕ್ತಿಯೊಬ್ಬರ ಮೃತದೇಹ ಸೆ.11ರಂದು ಬೆಳಗ್ಗೆ ಪತ್ತೆಯಾಗಿದೆ.
ಮೃತರನ್ನು ಕೇರಳ ರಾಜ್ಯದ ಕೊಲ್ಲಂ ಜಿಲ್ಲೆಯ ಶಿವದಾಸನ್ ವಿ.(84), ಎಂದು ಗುರುತಿಸಲಾಗಿದೆ. ಇವರು ನದಿಯಲ್ಲಿ ಸ್ನಾನ ಮಾಡುವಾಗ ಅಥವಾ ಇನ್ನಾವುದೋ ಕಾರಣದಿಂದ ನದಿಯ ನೀರಿನಲ್ಲಿ ಬಿದ್ದು ಮುಳುಗಿ ಮೃತಪಟ್ಟಿರ ಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.