ಮಲ್ಪೆ: ಕುಸಿದು ಬಿದ್ದು ಯುವಕ ಮೃತ್ಯು
Update: 2025-09-15 21:32 IST
ಮಲ್ಪೆ, ಸೆ.15: ಉಡುಪಿಯಲ್ಲಿ ಹೋಮ್ ನರ್ಸಿಂಗ್ ಕೆಲಸ ಮಾಡಿ ಕೊಂಡಿದ್ದ ಯುವಕನೋರ್ವ ಕುಸಿದು ಬಿದ್ದು ಮೃತಪಟ್ಟ ಘಟನೆ ಕಿನ್ನಿಮೂಲ್ಕಿ ಅಬ್ಕೊ ಸ್ಟೀಲ್ ಅಂಗಡಿ ಎದುರು ರಾಷ್ಟ್ರಿಯ ಹೆದ್ದಾರಿ 66ರಲ್ಲಿ ನಡೆದಿದೆ.
ಮೃತರನ್ನು ಹಾಸನ ಜಿಲ್ಲೆಯ ರತ್ನ ಎಂಬವರ ಮಗ ದೇವರಾಜ ಎ.ಎಂ. (33) ಎಂದು ಗುರುತಿಸಲಾಗಿದೆ. ಇವರು ಆರೋಗ್ಯ ಸಮಸ್ಯೆಯಿಂದ ಅಸ್ವಸ್ಥಗೊಂಡು ಸೆ.13ರಂದು ರಸ್ತೆ ಬದಿಯಲ್ಲಿ ಕುಸಿದು ಬಿದ್ದಿದ್ದರು. ತೀವ್ರ ವಾಗಿ ಅಸ್ವಸ್ಥಗೊಂಡ ಇವರು ಸೆ.14ರಂದು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.