ಬೋಟಿನಿಂದ ಸಮುದ್ರಕ್ಕೆ ಬಿದ್ದು ವ್ಯಕ್ತಿ ಮೃತ್ಯು
Update: 2025-09-26 21:58 IST
ಉಡುಪಿ, ಸೆ.26: ಬೋಟಿನಿಂದ ಅಕಸ್ಮಿಕವಾಗಿ ಧಕ್ಕೆಯ ನೀರಿಗೆ ಬಿದ್ದ ಮೀನುಗಾರರೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮಲ್ವೆ ಬಂದರಿನಲ್ಲಿ ನಡೆದಿದೆ.
ಮೃತರನ್ನು ತಮಿಳುನಾಡಿನ ತುತುಕುಡಿ ಜಿಲ್ಲೆ ತಿರುಮಂದುರ್‌ನ ಅಂತೋನಿರಾಜ್(60) ಎಂದು ಗುರುತಿಸಲಾಗಿದೆ. ಮಲ್ಪೆಯಲ್ಲಿ ಸರಿನಾ ಎಂಬವರ ಮಾಲಕತ್ವದ ಮೇಲಿಸಾ ಎಂಬ ಬೋಟಿನಲ್ಲಿ ಮೀನುಗಾರಿಕಾ ಕೆಲಸ ಮಾಡುತಿದ್ದ ಅಂತೋನಿರಾಜ್, ಬೋಟಿಗೆ ಐಸ್ ತುಂಬಲು ಬಾಪುತೋಟದ ಬಳಿ ನಿಲ್ಲಿಸಿದ್ದ ಬೋಟನ್ನು ಮುಂದೆ ತರಲು ಪ್ರಯತ್ನಿಸಿದಾಗ ಅಕಸ್ಮಿಕವಾಗಿ ಬೋಟಿನಿಂದ ಧಕ್ಕೆಯ ನೀರಿಗೆ ಬಿದ್ದರು ಎನ್ನಲಾಗಿದೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.