ಸಮೀಕ್ಷೆ ಕಾರ್ಯಕ್ಕೆ ನಿರ್ಲಕ್ಷ್ಯ ತೋರಿದರೆ ಶಿಸ್ತುಕ್ರಮ: ಉಡುಪಿ ಡಿಸಿ ಸ್ವರೂಪ
Update: 2025-09-27 22:45 IST
ಉಡುಪಿ, ಸೆ.27: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಈಗಾಗಲೇ ಪ್ರಾರಂಭಿಸಲಾಗಿದ್ದು, ಸಮೀಕ್ಷೆಗೆ ನಿಯೋಜನೆಗೊಂಡ ಗಣತಿದಾರರು ತಮಗೆ ನಿಯೋಜಿಸಲಾಗಿರುವ ಸಮೀಕ್ಷಾ ಬ್ಲಾಕ್‌ಗಳಲ್ಲಿ ಸಮೀಕ್ಷೆಯನ್ನು ನಿರ್ವಹಿಸಲು ಆದೇಶಿಸ ಲಾಗಿದೆ. ಯಾವುದೇ ಗಣತಿದಾರರು ಸಮೀಕ್ಷೆಯಲ್ಲಿ ನಿಷ್ಕಾಳಜಿ ತೋರುವಂತಿಲ್ಲ. ಗಣತಿದಾರರು ಸಮೀಕ್ಷೆಯಲ್ಲಿ ನಿರಾಸಕ್ತಿ ಅಥವಾ ಅಸಡ್ಡೆ, ತೋರಿದ್ದಲ್ಲಿ, ಅನಗತ್ಯ ನೆಪಗಳನ್ನು ಹೇಳಿ ಗಣತಿ ಕಾರ್ಯದಲ್ಲಿ ನಿರ್ಲಕ್ಷ್ಯ ತೋರಿದ್ದಲ್ಲಿ ನಿರ್ದಾಕ್ಷಿಣ್ಯವಾಗಿ ಇಲಾಖಾ ವಿಚಾರಣೆ ನಡೆಸಲು ಹಾಗೂ ಸರಕಾರದ ಕೆಲಸದಲ್ಲಿ ನಿಷ್ಕಾಳಜಿ ತೋರಿದ್ದಕ್ಕೆ ಶಿಸ್ತುಕ್ರಮ ಜರುಗಿಸಲು ಸರಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.