×
Ad

ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಅಣಕು ಕಾರ್ಯಾಚರಣೆ

Update: 2025-10-02 20:56 IST

ಉಡುಪಿ, ಅ.2:ಕೊಂಕಣ ರೈಲ್ವೆ ಮಾರ್ಗದ ಉಡುಪಿ ಇಂದ್ರಾಳಿ ರೈಲ್ವೆ ನಿಲ್ದಾಣದ ಬಳಿ ತುರ್ತು ಸಂದರ್ಭದಲ್ಲಿ ಪ್ರಯಾಣಿಕರ ರಕ್ಷಣೆಯ ಕುರಿತಂತೆ ಕೈಗೊಳ್ಳಬೇಕಾದ ಕ್ರಮದ ಕುರಿತು ರೈಲ್ವೆ ಪೊಲೀಸರು ನಿನ್ನೆ ಅಣಕು ಕಾರ್ಯಾಚರಣೆಯನ್ನು ನಡೆಸಿದರು.

ಈ ಕಾರ್ಯಾಚರಣೆಯಲ್ಲಿ ರೈಲ್ವೆ ಪೊಲೀಸರೊಂದಿಗೆ ಭಾಗವಹಿಸಿದ ಸಮಾಜ ಸೇವಕ ನಿತ್ಯಾನಂದ ಒಳಕಾಡು ತುರ್ತು ಸಂದರ್ಭಗಳಲ್ಲಿ ಕೈಗೊಳ್ಳ ಬೇಕಾದ ಕ್ರಮಗಳ ಕುರಿತು ಮಾಹಿತಿಯೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡರು.

ದೇಶದ ವಿವಿದೆಡೆಗಳಿಂದ ರೈಲುಗಳಲ್ಲಿ ಸಂಚರಿಸುವ ಪ್ರಯಾಣಿಕರು ಹಠಾತ್ತನೆ ಅಸ್ವಸ್ಥಗೊಂಡಾಗ ಅಥವಾ ಬಿದ್ದು ಗಾಯಗೊಂಡಾಗ ತಕ್ಷಣ ಅವರಿಗೆ ನೀಡಬೇಕಾದ ವೈದ್ಯಕೀಯ ನೆರವು ಕುರಿತು ರೈಲ್ವೆ ಪೊಲೀಸರಿಗೆ ವಿಶೇಷ ಮಾಹಿತಿಗಳನ್ನು ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News