ಕಾರ್ಕಳ : ‘ವಿಶ್ವ ರೆಬೀಸ್ ದಿನಾಚರಣೆ’ ಪ್ರಯುಕ್ತ ನಾಯಿ, ಬೆಕ್ಕುಗಳಿಗೆ ಉಚಿತ ಲಸಿಕೆ
ಕಾರ್ಕಳ :ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ, ಪುರಸಭೆ ಕಾರ್ಕಳ ಮತ್ತು ಪಶುಸಂಗೋಪನಾ ಇಲಾಖೆ ಕಾರ್ಕಳ ಇವರ ಜಂಟಿ ಆಶ್ರಯದಲ್ಲಿ ‘ವಿಶ್ವ ರೆಬೀಸ್ ದಿನಾಚರಣೆ’ಯ ಪ್ರಯುಕ್ತ ಕಾರ್ಕಳದ ಪಶು ಆಸ್ಪತ್ರೆಯಲ್ಲಿ ಒಟ್ಟು 135 ನಾಯಿ ಮತ್ತು ಬೆಕ್ಕುಗಳಿಗೆ ಉಚಿತ ರೆಬೀಸ್ ಲಸಿಕೆ ನೀಡಲಾಯಿತು.
ಕಾರ್ಯಕ್ರಮವನ್ನು ರೋಟರಿ ಮಾಜಿ ಜಿಲ್ಲಾ ಗವರ್ನರ್ ಡಾ. ಭರತೇಶ್ ಆದಿರಾಜ್ ಉದ್ಘಾಟಿಸಿದರು. ಕಾರ್ಕಳ ಪುರಸಭೆಯ ಅಧ್ಯಕ್ಷರಾದ ಯೋಗೀಶ್ ದೇವಾಡಿಗರವರು ಸಭಾಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ರೋಟರಿ ಅಧ್ಯಕ್ಷ ರೋl ಸುರೇಂದ್ರ ನಾಯಕ್ ಮಾತನಾಡುತ್ತಾ ಮುಂದಿನ ದಿನಗಳಲ್ಲಿ ಪಶು ಆಸ್ಪತ್ರೆಗೆ ಸುಸಜ್ಜಿತವಾದ ಶಸ್ತ್ರ ಚಿಕಿತ್ಸಾ ಸಲಕರಣೆಗಳನ್ನು ರೋಟರಿಯ ವತಿಯಿಂದ ಒದಗಿಸಲು ಪ್ರಯತ್ನ ಪಡಲಾಗುವುದು ಎಂದರು. ಮುಖ್ಯ ಅಥಿತಿ ಪುರಸಭಾ ಸದಸ್ಯೆ ಪ್ರಭಾ ಕಿಶೋರ್ ರೇಬಿಸ್ ಮಾಹಿತಿ ಬಿತ್ತಿ ಪತ್ರಗಳನ್ನು ಬಿಡುಗಡೆ ಗೊಳಿಸಿದರು. ಮುಖ್ಯ ಪಶುವೈದ್ಯಾಧಿಕಾರಿ ಡಾll ಚಂದ್ರಶೇಖರ ಸಾಲಿಮಠ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾll ವಾಸುದೇವ್ ಪೈ ಮುಖ್ಯ ಪಶುವೈದ್ಯಾಧಿಕಾರಿ ಕಾರ್ಯಕ್ರಮ ನಿರೂಪಿಸಿದರು. ಜಾನುವಾರು ಅಭಿವೃದ್ಧಿ ಅಧಿಕಾರಿ ಸರ್ವೋತ್ತಮ ನಾಯಕ್ ವಂದನಾರ್ಪಣೆ ಗೈದರು.
ಪಶು ವೈದ್ಯಾಧಿಕಾರಿ ಡಾll ಅರುಣಕುಮಾರ್ ನಿಟ್ಟೆ ಇವರು ಸಂಪನ್ಮೂಲ ವ್ಯಕ್ತಿಯಾಗಿ ರೇಬಿಸ್ ನ ಬಗ್ಗೆ ಸಾರ್ವಜನಿಕರಲ್ಲಿ ಅರಿವನ್ನು ಮೂಡಿಸಿದರು.