×
Ad

ಸಾಸ್ತಾನ ಕೋಡಿ ಕಡಲತೀರದಲ್ಲಿ ಸಮುದ್ರ ತೀರ ಸ್ವಚ್ಛತೆ

Update: 2025-10-05 18:19 IST

ಉಡುಪಿ, ಅ.5: ಎನ್‌ಎಂಎಎಂಟಿ ನಿಟ್ಟೆ, ಎನ್‌ಎಸ್‌ಎಸ್ ಘಟಕವು ಕೋಡಿ ಗ್ರಾಮ ಪಂಚಾಯತ್, ಸ್ವಯಂಸೇವಾ ಸಂಸ್ಥೆಯಾದ ಬೇರೂ ಕೋಸ್ಟ್ ಕ್ಲೀನ್ ಸಾಸ್ತಾನ, ಶೆಟ್ಟಿ ಏಗ್ರೋ ಸೆಂಟರ್ ಐರೋಡಿ ಇವರ ಸಹಕಾರದೊಂದಿಗೆ ಶನಿವಾರ ಸಾಸ್ತಾನದಲ್ಲಿ ಕೋಡಿ ಕಡಲತೀರದ ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸಿತು.

‘ಕಸವನ್ನು ಹಾಕುವುದಕ್ಕಿಂತ ಸಂಗ್ರಹಿಸುವುದು ಹೆಚ್ಚು ಕಷ್ಟ’ ಎಂಬ ಧ್ಯೇಯದಡಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 114 ಉತ್ಸಾಹಿ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಪಾಲ್ಗೊಂಡು ಬೆಳಗ್ಗೆನಿಂದ ಮಧ್ಯಾಹ್ನದ ವರೆಗೆ ಸಮುದ್ರ ತೀರದ ಸೌಂದರ್ಯವನ್ನು ಹೆಚ್ಚಿಸಲು ಶ್ರಮಿಸಿದರು. ಬಿಸಿಲಿನ ತೀವ್ರತೆಯ ನಡುವೆ ಸುಮಾರು 60 ಬ್ಯಾಗ್ ತ್ಯಾಜ್ಯ-ಕಸವನ್ನು ಸಂಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News