×
Ad

ಹೊಂಬಾಡಿ-ಮಂಡಾಡಿ ಗ್ರಾಪಂನಲ್ಲಿ ಪಿಡಿಒ ಹುದ್ದೆ ಖಾಲಿ: ಸದಸ್ಯರಿಂದ ಧರಣಿ

Update: 2025-10-06 20:21 IST

ಕುಂದಾಪುರ, ಅ.6: ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್ನಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿ ಹುದ್ದೆ ತೆರವಾಗಿ ಹಲವು ಸಮಯಗಳು ಕಳೆದರೂ ಕೂಡ ಅಗತ್ಯ ಕ್ರಮವಹಿಸದೇ ತಾಲ್ಲೂಕು, ಜಿಲ್ಲಾಡಳಿತ ನಿರ್ಲಕ್ಷ್ಯ ಧೋರಣೆ ಮಾಡಿದೆ ಎಂದು ಆರೋಪಿಸಿ ಗ್ರಾ.ಪಂ ಸದಸ್ಯರು ಪಂಚಾಯತ್ ಎದುರು ಸೋಮವಾರ ಧರಣಿ ನಡೆಸಿದರು.

ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್ ಸದಸ್ಯ ಸಂತೋಷ ಪೂಜಾರಿ ಮಾತನಾಡಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಯಿಲ್ಲದೆ 30-40 ದಿನಗಳು ಕಳೆದಿದೆ. ಕಾರ್ಯದರ್ಶಿ ಹುದ್ದೆಯೂ ಖಾಲಿಯಿದೆ. ಬೀದಿ ದೀಪ, ಕಸ ವಿಲೇ ವಾರಿ ಸಮಸ್ಯೆಯೂ ಹೆಚ್ಚಿದೆ. ಜನರ ಯಾವುದೇ ಕೆಲಸ ಕಾರ್ಯಗಳು ಆಗುತ್ತಿಲ್ಲ, ಕಡತಗಳು ಬಾಕಿಗಳಾಗಿದೆ. ಸಂಬಂದಪಟ್ಟ ಮೇಲಾಧಿಕಾರಿಗಳಿಗೆ ಈಗಾಗಾಲೇ ಮನವಿ ಮಾಡಲಾಗಿದೆ. ಮೂರು ನಾಲ್ಕು ದಿನದಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಅಹೋರಾತ್ರಿ ಧರಣಿ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.

ಧರಣಿಯಲ್ಲಿ ಸದಸ್ಯರಾದ ದಿನೇಶ ಮೊಗವೀರ, ಸಚಿನ್ ಶೆಟ್ಟಿ, ಉದಯ ಯಡಾಡಿ, ದೀಪಾ, ಮಾಜಿ ಸದಸ್ಯರಾದ ಕೆ.ಸೀತಾರಾಮ ಶೆಟ್ಟಿ ಜಪ್ತಿ, ನೊಂದ ಗ್ರಾಮಸ್ಥರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News