ಅಂದರ್ ಬಾಹರ್: ನಾಲ್ವರ ಬಂಧನ
Update: 2025-10-06 21:32 IST
ಮಣಿಪಾಲ: 80 ಬಡಗುಬೆಟ್ಟು ಗ್ರಾಮದ ರಾಜೀವ ನಗರದ ಬಸ್ ನಿಲ್ದಾಣದ ಬಳಿ ಅ.5ರಂದು ಸಂಜೆ ವೇಳೆ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ನಾಲ್ಕು ಮಂದಿ ಆರೋಪಿಗಳನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಕುಂದಾಪುರ ಹಳ್ಳಿಹೊಳೆಯ ಜಯಂತ್ ಪೂಜಾರಿ(37), ಪ್ರಗತಿನಗರದ ಶರಣಪ್ಪ ಪೂಜಾರಿ(45), ನೇತಾಜಿ ನಗರದ ಈಶ(36), ರಾಜೀವ ನಗರದ ಹಾಲೇಶ(35) ಬಂಧಿತ ಆರೋಪಿಗಳು. ಇವರಿಂದ 2100ರೂ ನಗದನ್ನು ವಶಪಡಿಸಿ ಕೊಳ್ಳಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.