×
Ad

ಡಿಕೆಎಸ್‌ಸಿ ಸಂಸ್ಥಾಪನಾ ದಿನಾಚರಣೆ: ವಿವಿಧ ಕಾರ್ಯಕ್ರಮ ಉದ್ಘಾಟನೆ

Update: 2025-10-14 21:42 IST

ಕಾಪು, ಅ.14: ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್(ಡಿ.ಕೆ.ಎಸ್.ಸಿ) ಮಂಗಳೂರು ಇದರ 31ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಮೂಳೂರು ಅಲ್-ಇಹ್ಸಾನ್ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡ ವಿವಿಧ ಕಾರ್ಯಕ್ರಮಗಳನ್ನು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅ.13ರಂದು ಉದ್ಘಾಟಿಸಿದರು.

ಅಧ್ಯಕ್ಷತೆಯನ್ನು ಡಿಕೆಎಸ್‌ಸಿ ಜಿಲ್ಲಾ ಸಮಿತಿ ಕಾರ್ಯಾಧ್ಯಕ್ಷ ಹುಸೈನ್ ಹಾಜಿ ಕಿನ್ಯ ವಹಿಸಿದ್ದರು. ಸಂಸ್ಥೆಯ ವ್ಯವಸ್ಥಾ ಪಕ ಮೌಲಾನಾ ಮುಸ್ತಫಾ ಸಅದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೋಟಿವೇಶನ್ ಸ್ಪೀಕರ್ ರಫೀಕ್ ಮಾಸ್ಟರ್ ಪ್ರೇರಣಾ ಭಾಷಣಗೈದರು. ಮುಖ್ಯ ಅತಿಥಿಗಳಾಗಿ ಡಿ.ಕೆ.ಎಸ್.ಸಿ ಕೇಂದ್ರ ಸಮಿತಿಯ ಕೋಶಾಧಿಕಾರಿ ಹಾಜಿ ದಾವೂದ್ ಕಜಮಾರ್ ಶುಭ ಹಾರೈಸಿದರು.

ವಿಝನ್ 30 ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಬಜ್ಪೆ, ಕೇಂದ್ರ ಸಮಿತಿಯ ಸದಸ್ಯರಾದ ಅಬ್ದುಲ್ ಹಮೀದ್ ಅರಮೆಕ್ಸ್ ಹಾಗೂ ಪ್ರೊಫೆಸರ್ ಯೂಸುಫ್, ಅನ್ವರ್ ಹುಸೈನ್ ಗೂಡಿನಬಳಿ, ಪ್ರಾಂಶುಪಾಲ ಹಬೀಬುರಹ್ಮಾನ್, ಶಬೀ ಅಹ್ಮದ್, ಝುಲ್ಟಿಕರ್ ಅಲಿ, ಮುಕ್ಕ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕೇಂದ್ರ, ವಲಯ, ರಾಷ್ಟ್ರ, ಜಿಲ್ಲಾ ಸಮಿತಿ ಹಾಗೂ ಅದರ ಅಧೀನ ಘಟಕಗಳ ನೇತಾರರು, ಸದಸ್ಯರು, ಸಂಸ್ಥಾಪನಾ ದಿನಾಚರಣೆಯ ಉಸ್ತುವಾರಿಗಳಾದ ಶರೀಫ್ ಬೆಳಪು, ಅನ್ಸಾರ್ ಕೃಷ್ಣಾಪುರ ಹಾಗೂ ಹಿತೈಷಿಗಳು ಭಾಗವಹಿಸಿದ್ದರು.

ಸಂಸ್ಥಾಪನಾ ದಿನದ ಪ್ರಯುಕ್ತ ಸಂಸ್ಥೆಯಲ್ಲಿ ದೀರ್ಘ ಕಾಲ ಸೇವೆ ಸಲ್ಲಿಸಿದ ಸಿಬ್ಬಂದಿಗಳಿಗೆ ಮತ್ತು ಸಂಸ್ಥೆಯ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಸಂಸ್ಥಾಪನಾ ದಿನದ ಪ್ರಯುಕ್ತ ಶ್ರೀನಿವಾಸ್ ಆಸ್ಪತ್ರೆ ಮುಕ್ಕ ಇವರ ಸಹಯೋಗದೊಂದಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ಅಬ್ದುಲ್ ರಹ್ಮಾನ್ ಕೋಯ ಮಳಲಿಯವರ ಸಹಯೋಗದೊಂದಿಗೆ ಸಂಸ್ಥೆಯ ವತಿಯಿಂದ ಉಚಿತ ಹಿಜಾಮ ಶಿಬಿರ ನಡೆಯಿತು

ಮದ್ಯಾಹ್ನ ನಂತರ ಮಸ್ಟಿದುಲ್ ಅನ್ಸಾರ್‌ನಲ್ಲಿ 1995ರಿಂದ ಈವರೆಗೆ ಡಿ.ಕೆ.ಎಸ್.ಸಿಯಲ್ಲಿ ಕಾರ್ಯಾಚರಿಸಿ ಮರಣ ಹೊಂದಿದ ನೇತಾರರು, ಕಾರ್ಯಕರ್ತರು, ಹಿತೈಷಿಗಳು, ದಾನಿಗಳು ಹಾಗೂ ಅವರ ಕುಟುಂಬಸ್ಥರೆಲ್ಲರ ಹೆಸರಿನಲ್ಲಿ ಅನುಸ್ಮರಣಾ ಕಾರ್ಯಕ್ರಮ ನಡೆಸಲಾಯಿತು.

ಸಂಸ್ಥಾಪನಾ ಸಮಿತಿಯ ಚೇಯರ್‌ಮೆನ್ ಮನ್ಸೂರ್ ರಯ್ಯಾನ್ ಕೃಷ್ಣಾಪುರ ಸ್ವಾಗತಿಸಿದರು. ಡಿ.ಕೆ.ಎಸ್.ಸಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಶುದ್ದೀನ್ ಬಳ್ಳುಂಜೆ ವಂದಿಸಿದರು. ಮಂಗಳೂರು ಘಟಕದ ಸದಸ್ಯ ಇಸಾಕ್ ಬೊಳ್ಳಾಯಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News