×
Ad

ಮಲ್ಪೆ ಬೀಚ್: ಅಲೆಯ ಸೆಳೆತಕ್ಕೆ ಮುಳುಗಿ ಪ್ರವಾಸಿಗ ಮೃತ್ಯು

Update: 2025-10-14 21:45 IST

ಮಲ್ಪೆ, ಅ.14: ಮಲ್ಪೆ ಬೀಚ್‌ನಲ್ಲಿ ಈಜಾಡುತ್ತಿದ್ದ ಪ್ರವಾಸಿಗರೊಬ್ಬರು ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಅ.14ರಂದು ಸಂಜೆ ವೇಳೆೆ ನಡೆದಿದೆ.

ಮೃತರನ್ನು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಮಾರಸಂದ್ರದ ವೆಂಕಟಚಲ(40) ಎಂದು ಗುರುತಿಸಲಾ ಗಿದೆ. ಮೂವರು ರಾಮನಗರದಿಂದ ಸೋಮವಾರ ರಾತ್ರಿ ಪ್ರವಾಸಕ್ಕೆಂದು ಹೊರಟಿದ್ದು ಬೆಳಗ್ಗೆ ಮರವಂತೆ ಬೀಚ್‌ಗೆ ತೆರಳಿ, ಸಂಜೆ ಮಲ್ಪೆ ಬೀಚ್‌ಗೆ ಬಂದಿದ್ದರು.

ಮೂವರು ಸಮುದ್ರದಲ್ಲಿ ಈಜಾಡುತ್ತಿದ್ದು ಇವರಲ್ಲಿ ವೆಂಕಟಚಲ ಈಜುತ್ತ ಮುಂದೆ ಹೋಗಿ ಅಲೆಗಳ ಸೆಳೆತಕ್ಕೆ ಸಿಲುಕಿ ನೀರು ಪಾಲಾದರು. ತತ್‌ಕ್ಷ ಣ ಇಲ್ಲಿನ ಜೀವರಕ್ಷ ತಂಡದವರು ಅವರನ್ನು ಹಿಡಿದು ದಡ ಸೇರಿಸಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಮುಳುಗು ತಜ್ಞ ಈಶ್ವರ್ ಮಲ್ಪೆ ಅವರ ಅ್ಯಂಬುಲೆನ್ಸ್‌ನಲ್ಲಿ ಉಡುಪಿಯ ಖಾಸಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ತೀವ್ರ ಆಸ್ವಸ್ಥಗೊಂಡು ಅವರು ಆದಾಗಲೇ ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದರು. ಮೃತದೇಹವನ್ನು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಇರಿಸಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News