ಶಿರ್ವ: ಕಬ್ಬಿಣದ ಶೀಟ್ ಕಳ್ಳತನ, ಆರೋಪ ಬಂಧನ
Update: 2025-10-15 21:51 IST
ಕಾಪು, ಅ.15: ತಾಲೂಕಿನ ಶಿರ್ವ ಗ್ರಾಮದಲ್ಲಿ ಲೂಯಿಸ್ ಮಥಾಯಿಸ್ ಎಂಬವರ ಮನೆಯ ಬಳಿ ಇಟ್ಟಿದ್ದ ಕಬ್ಬಿಣದ ಸೆಂಟ್ರಿಂಗ್ ಶೀಟುಗಳನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೈಂದೂರು ತಾಲೂಕು ಶಿರೂರು ಗ್ರಾಮದ ಆಲಂದೂರಿನ ರಶೀದ್ ಮೊಯಿದ್ದೀನ್ (40) ಬಂಧಿತ ಆರೋಪಿ.
ವಿಚಾರಣೆಯ ವೇಳೆ ಆರೋಪಿ ಶಿರ್ವ ಠಾಣಾ ವ್ಯಾಪ್ತಿಯ ಬಂಟಕಲ್, ಪಂಜಿಮಾರ್, ಪಡುಬಿದ್ರಿ ಠಾಣಾ ವ್ಯಾಪ್ತಿಯ ಎಲ್ಲೂರು, ಹಾಗೂ ಕುಂದಾಪುರ ಠಾಣಾ ವ್ಯಾಪ್ತಿಯ ಕಟ್‌ಬೆಲ್ತೂರ್‌ಗಳಲ್ಲಿ ಸಹ ಕಬ್ಬಿಣದ ಶೀಟ್‌ಗಳನ್ನು ಕಳವು ಮಾಡಿರುವುದು ಪತ್ತೆಯಾಗಿದೆ.
ಬಂಧಿತನಿಂದ ಒಟ್ಟು 300 ಕಬ್ಬಿಣದ ಶೀಟ್‌ಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ವಾಹನ ಸೇರಿ 5.50ಲಕ್ಷ ರೂ. ಮೌಲ್ಯದ ಸೊತ್ತುಗಲನ್ನು ವಶಪಡಿಸಿಕೊಳ್ಳ ಲಾಗಿದೆ.
ಆರೋಪಿಯ ವಿರುದ್ಧ ಉಡುಪಿ, ದಕ್ಷಇಣ ಕನ್ನಡ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವಿವಿಧ ಠಾಣೆಗಳಲ್ಲಿ 30ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.