×
Ad

ಉಡುಪಿ: ಇಬ್ಬರು ಯಕ್ಷ ಕಲಾವಿದರಿಗೆ ಸರ್ಪಂಗಳ ಪ್ರಶಸ್ತಿ ಪ್ರದಾನ

Update: 2025-10-16 20:09 IST

ಉಡುಪಿ: ಸುರತ್ಕಲ್, ಹನುಮಗಿರಿ ಮುಂತಾದ ಮೇಳಗಳಲ್ಲಿ 54 ವರ್ಷಗಳ ಕಾಲ ತಿರುಗಾಟ ಮಾಡಿದ ಹಿರಿಯ ಕಲಾವಿದ ವೇಣೂರು ಸದಾಶಿವ ಕುಲಾಲ್ ಇವರಿಗೆ ಈ ಬಾರಿಯ ‘ಸರ್ಪಂಗಳ ಪ್ರಶಸಿ’ ನೀಡಿ ಗೌರಸಲಾಯಿತು.

ಜೀವವಿಮಾ ನಿಗಮದ ನಿವೃತ್ತ ಅಧಿಕಾರಿಗಳೂ, ಕಲಾಪೋಷಕರೂ ಆಗಿದ್ದ, ಸರ್ಪಂಗಳ ಸುಬ್ರಮಣ್ಯ ಭಟ್ ನೆನಪಿನ 14ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ತ್ತೀಚೆಗೆ ಜರಗಿತು.

ಇದೇ ಸಂದರ್ಭದಲ್ಲಿ ಮೂರು ದಶಕಗಳ ಕಾಲ ಚಕ್ರತಾಳ ಕಲಾವಿದರಾಗಿ ಸೇವೆ ಸಲ್ಲಿಸಿದ ಸುರತ್ಕಲ್‌ನ ಪಿ.ಸುರೇಶ್ ಕಾಮತ್ ಇವರಿಗೆ ‘ಸರ್ಪಂಗಳ ಪುರಸ್ಕಾರ’ ನೀಡಿ ಗೌರವಿಸಲಾಯಿತು.

ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಪ್ರಶಸ್ತಿ ಪ್ರದಾನ ನೆರವೇರಿಸಿದರು. ನಳಿನೀ ಎಸ್. ಭಟ್ ಮತ್ತು ಮಕ್ಕಳು ಪ್ರಾಯೋಜಿಸಿದ ಈ ಕಾರ್ಯಕ್ರಮದಲ್ಲಿ ಡಾ.ಶೈಲಜಾ ಭಟ್, ಡಾ. ನರೇಂದ್ರ ಶೆಣೈ, ಅವಂತಿಕಾ, ಅನಿರುದ್ಧ ಉಪಸ್ಥಿತರಿದ್ದರು.

ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಪ್ರಸಿದ್ಧ ಕಲಾದರಿಂದ ‘ಉಷಾ ಪರಿಣಯ’ ಯಕ್ಷಗಾನ ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News