ನಗರಸಭೆಯ ಉಳಿಕೆ ಅನುದಾನದಲ್ಲಿ ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನ
ಉಡುಪಿ, ಅ.16: ಉಡುಪಿ ನಗರಸಭೆಯ 2024-25ನೇ ಸಾಲಿನ ವಿವಿಧ ಕಾರ್ಯಕ್ರಮದಡಿ ಮೀಸಲಿರಿಸಿದ ಅನುದಾನದ ಉಳಿಕೆ ಮೊತ್ತದಲ್ಲಿ ವಿವಿಧ ಸೌಲಭ್ಯಗಳಿಗೆ ಅನುದಾನ ನೀಡುವುದಕ್ಕಾಗಿ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಎಸ್‌ಎಫ್‌ಸಿ ಅನುದಾನದ ಶೇ.5ರ ವಿಕಲಚೇತನ ಕಾರ್ಯಕ್ರಮದಡಿ ಸಣ್ಣ ಉದ್ದಿಮೆ, ಮನೆ ದುರಸ್ಥಿ, ಕೃತಕ ಅಂಗ ಜೋಡಣೆ/ ಶಸ್ತ್ರಚಿಕಿತ್ಸೆಗೆ ಧನಸಹಾಯ, ರಾಜ್ಯ, ರಾಷ್ಟ್ರೀಯ ಮಟ್ಟದ ಕ್ರೀಡೆ / ಸಾಂಸ್ಕೃತಿಕ ಹಾಗೂ ಇತರೆ ವ್ಯಾಸಾಂಗೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಪ್ರೋತ್ಸಾಹಧನ, ಎಸೆಸೆಲ್ಸಿಯಿಂದ ಮಾಸ್ಟರ್ ಡಿಗ್ರಿವರೆಗಿನ ವಿದ್ಯಾರ್ಥಿಗಳಿಗೆ ಸಹಾಯಧನ, ಎಸ್.ಎಫ್.ಸಿ / ಮುಕ್ತನಿಧಿ ಮತ್ತು ಪುರಸಭಾ ನಿಧಿಯ ಶೇ. 7.25ರ ಇತರೆ ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮ, ಪ.ಜಾತಿ/ಪಂಗಡದ ಕಲ್ಯಾಣ ಕಾರ್ಯಕ್ರಮ ಹಾಗೂ ಟಿ.ಎಸ್.ಪಿ (ಪ.ಪಂಗಡದ ಅನುದಾನ) ಕಾರ್ಯಕ್ರಮದಡಿ ಪಿಯುಸಿಯಿಂದ ಉತ್ತೀರ್ಣರಾದ ಪದವಿ, ಬಿ.ಎ, ಬಿಎಸ್‌ಸಿ, ಬಿಕಾಂ, ಬಿಬಿಎ, ಬಿಬಿಎಂ, ಬಿಸಿಎ ಇತರೆ ಪದವಿಯ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಮತ್ತು ಎಸೆಸೆಲ್ಸಿ ಉತ್ತೀರ್ಣರಾದ ಪಿಯುಸಿ, ಐಟಿಐ ಮತ್ತು ಇತರ ವೃತ್ತಿಪರ ತರಗತಿ ಡಿಪ್ಲೋಮಾ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸೌಲಭ್ಯ ಗಳು ಇದರಲ್ಲಿ ಲಭ್ಯವಿರುತ್ತದೆ.
ಆಸಕ್ತರು ಅಕ್ಟೋಬರ್ 17ರ ಒಳಗೆ ಪೂರಕ ದಾಖಲಾತಿಗಳೊಂದಿಗೆ ಉಡುಪಿ ನಗರಸಭಾ ಕಚೇರಿಗೆ ಅರ್ಜಿ ಸಲ್ಲಿಸಬಹುದು ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.