ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ : ಸಹಾಯವಾಣಿ ಸ್ಥಾಪನೆ
ಉಡುಪಿ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ರಾಜ್ಯದ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಸೆ.22 ರಂದು ಪ್ರಾರಂಭಿಸಿದ್ದು, ಉಡುಪಿ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಸಮೀಕ್ಷೆ ಪೂರ್ಣಗೊಂಡಿದೆ.
ಸಮೀಕ್ಷೆ ಬಾಕಿಯಿರುವ ಸಾರ್ವಜನಿಕರು ರಾಜ್ಯ ಮಟ್ಟದ ಸಹಾಯವಾಣಿ ಸಂಖ್ಯೆ:8050770004, ಜಿಲ್ಲಾ ಮಟ್ಟದ ಸಹಾಯವಾಣಿ 0820- 2574881,ಉಡುಪಿ/ಬ್ರಹ್ಮಾವರ/ಕಾಪು ತಾಲೂಕು ಮಟ್ಟದ ಸಹಾಯವಾಣಿ ಸಂಖ್ಯೆ: 0820-2520739, ಬೈಂದೂರು/ಕುಂದಾಪುರ ತಾಲೂಕು ಮೊ.ನಂ: 9972294198 ಮತ್ತು ಕಾರ್ಕಳ-ಹೆಬ್ರಿ ತಾಲೂಕು ಸಹಾಯವಾಣಿ ಸಂಖ್ಯೆ: 08258-298610ಗೆ ಕರೆಮಾಡುವ ಮೂಲಕ ಅಥವಾ ತಮ್ಮ ಸ್ಥಳೀಯ ಪಂಚಾಯತ್/ಪುರಸಭೆ/ನಗರಸಭೆ/ಪಟ್ಟಣ ಪಂಚಾಯತ್‌ಗೆ ತೆರಳಿ ಅಥವಾ ತಮ್ಮ ಮೊಬೈಲ್/ಲ್ಯಾಪ್‌ಟಾಪ್‌ನಲ್ಲಿ -https://kscbcselfdeclaration.karnataka.gov.in- ಲಿಂಕ್ ಮೂಲಕ ಅಕ್ಟೋಬರ್ 31ರ ಒಳಗೆ ಸಮೀಕ್ಷೆಯನ್ನು ಪೂರ್ಣಗೊಳಿಸಿ ಜಿಲ್ಲೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಪೂರ್ಣ ಗೊಳಿಸಲು ಸಹಕರಿಸುವಂತೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.