ವ್ಯಾಪಾರಿಯ ಲಕ್ಷಾಂತರ ರೂ. ನಗದು ಕಳವು: ಪ್ರಕರಣ ದಾಖಲು
Update: 2025-10-25 21:18 IST
ಕೋಟ, ಅ.25: ವ್ಯಾಪಾರಿಯೊಬ್ಬರ ಲಕ್ಷಾಂತರ ರೂ. ನಗದು ಇದ್ದ ಬ್ಯಾಗ್ ಕಳವು ಮಾಡಿರುವ ಘಟನೆ ಶಿರಿಯಾರ ಎಂಬಲ್ಲಿ ನಡೆದಿದೆ.
ಶಿರಿಯಾರದ ಬಿ.ರವಿಶಂಕರ ಭಟ್ ಎಂಬವರು ಶಿರಿಯಾರ ಪೇಟೆಯಲ್ಲಿ ವಿನಾಯಕ ಸ್ಟೋರ್ ಎಂಬ ಹೆಸರಿನ ದಿನಸಿ ಅಂಗಡಿ ವ್ಯವಹಾರ ನಡೆಸಿ ಕೊಂಡಿದ್ದು ಅ.23ರಂದು ರಾತ್ರಿ ಅಂಗಡಿ ವ್ಯವಹಾರ ಮುಗಿಸಿ ವ್ಯವಹಾರದ 1,25,000ರೂ. ಹಣವನ್ನು ಬ್ಯಾಗ್‌ನಲ್ಲಿ ತುಂಬಿಸಿಕೊಂಡು ಅಂಗಡಿಗೆ ಬೀಗವನ್ನು ಹಾಕಿದ್ದು, ಬಳಿಕ ಮನೆಗೆ ಬಂದು ಮನೆಯ ಸಿಟೌಟ್ ನಲ್ಲಿ ಬ್ಯಾಗ್ ನ್ನು ಇರಿಸಿ ಕಾಲು ತೊಳೆಯಲು ಹೋದಾಗ ಅಪರಿಚಿತ ಕಳ್ಳರು ಸಿಟೌಟ್ ನಲ್ಲಿದ್ದ ಬ್ಯಾಗನ್ನು ಕಳುವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.