×
Ad

ಯೋಗಪಟು ತನುಶ್ರೀ 10ನೇ ವಿಶ್ವದಾಖಲೆ

Update: 2025-10-24 20:46 IST

ಉಡುಪಿ, ಅ.24: ಯೋಗಬಾಲೆ ತನುಶ್ರೀ ಪಿತ್ರೋಡಿ 50 ನಿಮಿಷದಲ್ಲಿ 333 ಆಸನಗಳನ್ನು ಮಾಡುವ ಮೂಲಕ ಹತ್ತನೇ ವಿಶ್ವದಾಖಲೆ ಮಾಡಿದ್ದಾರೆ.

ಬಹರೈನ್ ಕನ್ನಡ ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆಯಾಗಿದ್ದಾರೆ. ಈ ಹಿಂದೆ ಅದಮಾರು ಪರ್ಯಾಯ ಸಂದರ್ಭ 45 ನಿಮಿಷದಲ್ಲಿ 245 ಆಸನಗಳನ್ನು ಮಾಡುವ ಮೂಲಕ ದಾಖಲೆ ಮಾಡಿದ್ದರು. ಇದೀಗ ತನ್ನ ದಾಖಲೆಯನ್ನು ತಾನೇ ಮುರಿಯುವ ಮೂಲಕ ಹತ್ತನೇ ವಿಶ್ವದಾಖಲೆ ಮಾಡಿದ್ದಾರೆ.

ಬಹರೈನ್ ಕನ್ನಡ ಸಂಘದ ಅಧ್ಯಕ್ಷ ಅಜಿತ್ ಬಂಗೇರ, ಬಹರೈನ್ ಯೋಗ ಅಸೋಸಿಯೇಶನ್ ಅಧ್ಯಕ್ಷೆ ಫಾತಿಮಾ ಅಲ್ ಮನ್ಸೂರಿ, ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್‌ನ ಮನೀಶ್ ಬಿಷ್ಣೋಯಿ, ಬಹರೈನ್ ಇಂಡಿಯನ್ ಸ್ಕೂಲ್ ಚರ್ಯ ಮಾನ್ ಬಿನು ಮನ್ನಿಲ್ ವರ್ಗಿಸ್, ಬೆಹರಿನ್ ಕೇರಳೀಯ ಸಮಾಜಮ್ ಅಧ್ಯಕ್ಷ ಪಿ.ವಿ.ರಾಧಾಕೃಷ್ಣ ಪಿಳ್ಳೆ ಬಹರೈನ್ ಇಂಡಿಯನ್ ಕ್ಲಬ್ ಅಧ್ಯಕ್ಷ ಜೊಸೆಫ್ ಜಾಯ್, ಯುನಿಕೋ ಗ್ರೂಪ್ ಬಹರೈನ್ ಸಿಇಒ ಜಯಶಂಕರ್ ವಿಶ್ವನಾಥನ್, ಸಂಧ್ಯಾ ಉದಯ್ ದಂಪತಿ, ರಾಘವೇಂದ್ರ ದೇವಾಡಿಗ, ರೀತುಶ್ರೀ, ಬಹರೈನ್ ಕನ್ನಡ ಸಂಘದ ರಾಮ್ ಪ್ರಸಾದ್ ಅಮ್ಮೆನಡ್ಕ, ನಿತಿನ್ ಶೆಟ್ಟಿ, ಈಶ್ವರ್ ಅಂಚನ್, ಹರಿನಾಥ್ ಸುವರ್ಣ, ಹರಿಣಿ ಶೆಟ್ಟಿ, ಪುಲಕೇಶಿ, ಹರೀಶ್ ಗೌಡ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News