ಸ್ಕೂಟರ್ ಡಿಕ್ಕಿಯಲ್ಲಿಟ್ಟಿದ್ದ 1.50 ಲಕ್ಷ ರೂ. ನಗದು ಕಳವು
Update: 2024-02-10 20:43 IST
ಮಲ್ಪೆ, ಫೆ.10: ಸ್ಕೂಟರ್‌ನಲ್ಲಿ ಇಟ್ಟಿದ್ದ ಲಕ್ಷಾಂತರ ರೂ. ನಗದು ಹಣವನ್ನು ಕಳವು ಮಾಡಿರುವ ಘಟನೆ ಫೆ.9ರಂದು ಬೆಳಗ್ಗೆ ಮಲ್ಪೆ ಬಂದಿರನಲ್ಲಿ ನಡೆದಿದೆ.
ಕೊಡವೂರಿನ ಶಮಿತ್ ಎಂಬವರು ಬೋಟಿನ ಮೀನು ಮಾರಾಟದ ಬಿಲ್ಲಿನ ಹಣ 1,50,000ರೂ. ಹಣವನ್ನು ಪೌಚ್‌ನಲ್ಲಿ ಹಾಕಿ ಸ್ಕೂಟರಿನ ಸೀಟಿನ ಅಡಿ ಡಿಕ್ಕಿಯಲ್ಲಿಟ್ಟು, ಇನ್ನೊಂದು ಮೀನು ಪಾರ್ಟಿಯ ಕಚೇರಿಗೆ ಮೀನು ಮಾರಾಟದ ಬಿಲ್ಲಿನ ಹಣ ವನ್ನು ತರಲು ಹೋಗಿದ್ದರು. ಈ ವೇಳೆ ಓರ್ವ ವ್ಯಕ್ತಿ ಸ್ಕೂಟರಿನ ಸೀಟನ್ನು ಕೈಯಲ್ಲಿ ಎತ್ತಿ ಹಣವನ್ನು ಎತ್ತಿಕೊಂಡು ಹೋಗು ತ್ತಿದ್ದು, ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.