×
Ad

ಉಡುಪಿ: ರಾಜಾಂಗಣದಲ್ಲಿ 18 ದಿನಗಳ ಪ್ರವಚನಕ್ಕೆ ಚಾಲನೆ

Update: 2023-12-11 20:22 IST

ಉಡುಪಿ, ಡಿ.11: ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ ಉಡುಪಿ ಶ್ರೀಕೃಷ್ಣಮಠದರಾಜಾಂಗಣದಲ್ಲಿ ಬೆಂಗಳೂರಿನ ಬ್ರಹ್ಮಣ್ಯಾಚಾರ್ಯ ರಿಂದ ಗೀತಾ ಜಯಂತಿ ಪ್ರಯುಕ್ತ 18ದಿನಗಳ ಪ್ರವಚನ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು.

ಸತತ 26ನೇ ವರ್ಷದ ಈ ಪ್ರವಚನ ಡಿ.27ರವರೆಗೆ ಕಿದಿಯೂರು ಹೊಟೇಲ್‌ನ ಪ್ರಾಯೋಜಕತ್ವದಲ್ಲಿ ಪ್ರತಿದಿನ ಸಂಜೆ 6ರಿಂದ 7ಗಂಟೆಯವರೆಗೆ ರಾಜಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಪರ್ಯಾಯ ಶ್ರೀಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥರು ದೀಪ ಬೆಳಗಿಸಿ ಉದ್ಘಾಟಿಸಿದರು.

ಜೀವನ ಪಾವನಗೊಳ್ಳಲು ಗೀತೆಯ ನುಡಿಗಳು ನಮಗೆ ಪರಿಪಾಠ ವಾಗಬೇಕು. ಇಂತಹ ಪ್ರವಚನ ಮೂಲಕ ಶ್ರೀ ಕೃಷ್ಣ ಸಂದೇಶ ಎಲ್ಲರ ಮನೆ ಬೆಳಗಲಿ ಎಂದು ಕೃಷ್ಣಾಪುರ ಸ್ವಾಮೀಜಿಗಳು ಅನುಗ್ರಹ ಭಾಷಣದಲ್ಲಿ ಹೇಳಿದರು.

ಕಿದಿಯೂರು ಹೋಟೆಲಿನ ಮಾಲಕರಾದ ಭುವನೇಂದ್ರ ಕಿದಿಯೂರು, ಯುವರಾಜ್ ಮಸ್ಕತ್, ಜಿತೇಶ್ ಕಿದಿಯೂರು, ಮದುಸೂಧನ್ ಪೂಜಾರಿ ಕೆಮ್ಮಣ್ಣು, ಪುರಂದರ ಕಿದಿಯೂರು, ವಿಲಾಸ ಕುಮಾರ್, ಮಠದ ದಿವಾನರಾದ ವರದರಾಜ ಭಟ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News