×
Ad

ಕರ್ನಾಟಕ ಕ್ರೀಡಾಕೂಟ| ಕಬಡ್ಡಿ: ದ.ಕ., ಉಡುಪಿ ಮಹಿಳೆಯರಿಗೆ ಸತತ 2ನೇ ಜಯ

Update: 2025-01-20 21:48 IST

ಉಡುಪಿ: ಅಜ್ಜರಕಾಡಿನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿರುವ ಕರ್ನಾಟಕ ಕ್ರೀಡಾಕೂಟದ ಕಬಡ್ಡಿ ಸ್ಪರ್ಧೆಯ ಮಹಿಳೆಯರ ವಿಭಾಗದಲ್ಲಿ ಇಂದು ಆತಿಥೇಯರಾದ ದಕ್ಷಿಣ ಕನ್ನಡ ಹಾಗೂ ಉಡುಪಿ ತಂಡಗಳು ಸತತ ಎರಡನೇ ಜಯ ದಾಖಲಿಸಿವೆ.

ನಿನ್ನೆ ಹಾವೇರಿ ತಂಡವನ್ನು ಬಗ್ಗುಬಡಿದಿದ್ದ ದಕ್ಷಿಣ ಕನ್ನಡದ ಮಹಿಳಾ ತಂಡ ಇಂದು ವಿಜಯಪುರ ತಂಡವನ್ನು 48-13 ಅಂಕಗಳ ಅಂತರಿಂದ ಪರಾಭವಗೊಳಿಸಿದರು. ಸಂಪೂರ್ಣ ಏಕಪಕ್ಷೀಯವಾಗಿ ನಡೆದ ಈ ಪಂದ್ಯದಲ್ಲಿ ದಕ್ಷಿಣ ಕನ್ನಡ ಮದ್ಯಂತರದ ವೇಳೆ 22-07ರ ಮುನ್ನಡೆ ಸಾಧಿಸಿದ್ದು, ಕೊನೆಗೆ 35 ಅಂಕಗಳ ಅಂತರದ ಜಯಗಳಿಸಿದರು.

ಮೊದಲ ಪಂದ್ಯದಲ್ಲಿ ಮೈಸೂರನ್ನು ಸೋಲಿಸಿದ್ದ ಉಡುಪಿಯ ಮಹಿಳೆಯರು ಇಂದು ಬೆಳಗಾವಿ ತಂಡವನ್ನು ಏಳು ಅಂಕ ಗಳಿಂದ ಪರಾಭವಗೊಳಿಸಿದರು. ಮಧ್ಯಂತರಕ್ಕೆ 10-5ರ ಮುನ್ನಡೆ ಸಾಧಿಸಿದ್ದ ಉಡುಪಿ ಅಂತಿಮವಾಗಿ 19-12ರ ಅಂತರದ ಜಯ ದಾಖಲಿಸಿದರು.

ಇನ್ನುಳಿದ ಎರಡು ಪಂದ್ಯಗಳಲ್ಲಿ ಬೆಂಗಳೂರು ತಂಡ ಮೈಸೂರನ್ನು 23-12 ಅಂತರದಿಂದ ಸೋಲಿಸಿದರೆ, ಚಿಕ್ಕಮಗಳೂರು ತಂಡ ಹಾವೇರಿ ಜಿಲ್ಲಾ ತಂಡ ವನ್ನು 20-15 ಅಂಕಗಳ ಅಂತರದಿಂದ ಸೋಲಿಸಿತು. ಎರಡೂ ತಂಡಗಳು ಸತತ ಎರಡನೇ ಜಯ ದಾಖಲಿಸಿವೆ.

ಪುರುಷರ ವಿಭಾಗದಲ್ಲಿ ದಕ್ಷಿಣ ಕನ್ನಡ ಸತತ ಎರಡನೇ ಜಯ ದಾಖಲಿಸಿದರೆ ಉಡುಪಿ ಸೋಲನನುಭವಿಸಿತು. ದ.ಕ. ತಂಡ ಧಾರವಾಡವನ್ನು 37-15 ಅಂಕಗಳ ಅಂತರಿಂದ ಹಿಮಮೆಟ್ಟಿಸಿದರೆ, ಹಾಸನ ತಂಡ, ಉಡುಪಿ ತಂಡವನ್ನು 23-15ರ ಅಂತರಿಂದ ಸೋಲಿಸಿತು.

ಉಳಿದಂತೆ ಬೆಂಗಳೂರು ಗ್ರಾಮಾಂತರ ಪುರುಷರ ತಂಡ ಮಂಡ್ಯ ತಂಡ ವನ್ನು 52-40 ಅಂಕಗಳ ಭರ್ಜರಿ ಅಂತರದಿಂದ ಸೋಲಿಸಿದರೆ, ಬಾಗಲಕೋಟೆ ಜಿಲ್ಲಾ ತಂಡ, ಬೆಂಗಳೂರು ನಗರ ತಂಡವನ್ನು 43-26 ಅಂಕಗಳ ಅಂತರದಿಂದ ಸೋಲಿಸಿತು.

ಬಾಕ್ಸಿಂಗ್ ಸ್ಪರ್ಧೆ: ಉತ್ತರ ಕನ್ನಡದ ಸ್ಪರ್ಧಿಗಳಿಂದ ಗಮನಾರ್ಹ ಸಾಧನೆ


ಕರ್ನಾಟಕ ಕ್ರೀಡಾಕೂಟದ ಬಾಕ್ಸಿಂಗ್ ಸ್ಪರ್ಧೆಗಳ ನಿರ್ಣಾಯಕ ಹಂತ ಇಂದು ಜಿಲ್ಲಾ ಕ್ರೀಡಾಂಗಣದ ಬಾಕ್ಸಿಂಗ್ ರಿಂಗ್‌ನಲ್ಲಿ ನಡೆದಿದ್ದು, ಉತ್ತರ ಕನ್ನಡ ಜಿಲ್ಲೆಯ ಬಾಕ್ಸರ್‌ಗಳು ಎಲ್ಲರ ಗಮನ ಸೆಳೆಯುವ ಪ್ರದರ್ಶನ ನೀಡಿದರು.

ಸ್ಪರ್ಧೆಯ ಫಲಿತಾಂಶ ಹೀಗಿದೆ. ಪುರುಷರ ವಿಭಾಗದಲ್ಲಿ ಚಿನ್ನ, ಬೆಳ್ಳಿ, ಕಂಚಿನ ಪದಕ ವಿಜೇತ ವಿವರ ಹೀಗಿದೆ.

ಬಾಂಟಂವೆಯ್ಡ್:1.ನಿಖಿಲ್ ಬೆಳಗಾಂವಕರ್, ಉತ್ತರ ಕನ್ನಡ, 2. ಪ್ರಜ್ವಲ್ ಎಂ.ಎಸ್. ಮೈಸೂರು, 3.ಶೃವಣ್‌ರಾಜ್ ಪಾಟೀಲ್ ಬೆಳಗಾವಿ ಗಾದೂ ನಿಹಾಲ್ ಎಂ.ಸಿದ್ದಿ ಉ.ಕ. ಲೈಟ್ ವೆಯ್ಟ್: 1.ಪವನ ಸಿದ್ದಿ, ಉ.ಕ, 2.ಇಗ್ನಿಷಿಯಸ್ ಅಂಟೋನ್ ಡಿಗ್ಗೀಕರ್ ಉ.ಕ., 3.ಪ್ರಥಮೇಶ್ ಗರ್ದೆ ಬೆಳಗಾವಿ ಹಾಗೂ ತೇಜ್ ಆದಿತ್ಯ ಬೆಂಗಳೂರು.

ವೆಲ್ಟರ್‌ವೆಯ್ಟ್: 1.ಇಶಾ ಖಾನ್ ಬೆಂಗಳೂರು, 2.ಮಂಥನ್ ಗಜಾನನ, ಬೆಳಗಾವಿ, 3. ಆಕಾಶ್ ವಿ. ಬೆಂಗಳೂರು ಹಾಗೂ ಸಮೃದ್ಧ್ ಪಿ., ಶಿವಮೊಗ್ಹ. ಮಿಡ್ಲ್‌ವೆಯ್ಟ್: ಲಿಖಿತ್ ವಿ ಬೆಂಗಳೂರು ನಗರ, 2.ಹಿತೇಶ್ ಜಿ. ಬೆಂಗಳೂರು 3.ರಝೀನ್ ಅಹಮ್ಮದ್ ಜಮಾದಾರ್ ಬೆಳಗಾವಿ ಹಾಗೂ ಅಲ್ಲನ್ ಪಿ.ಎಸ್. ರಾಮನಗರ.

ಲೈಟ್‌ಹೆವಿ: 1. ಅರ್ಜುನ್ ಪಟೇಲ್, ಮೈಸೂರು, 2.ಮಹಮ್ಮದ್ ಅಯಾನ್ ಮೈಸೂರು. ಹೆವಿವೆಯ್ಟ್: 1.ಅಮೃತ್ಯರೈ ಬೆಂಗಳೂರು, 2. ಕೆ.ಎಸ್. ಶೌರ್ಯ ಬೆಂಗಳೂರು, 3.ಇಸಾರ್ ಖಾನ್ ಬೆಂಗಳೂರು ನಗರ.

ಮಹಿಳೆಯರ ವಿಭಾಗ: ಬಾಂಟಂ ವೆಯ್ಟ್: 1.ಸಮಂತಾ ಸೇವರ್ ಸಿದ್ಧಿ ಉತ್ತರ ಕನ್ನಡ, 2.ಶೀತಲ್ ಎಸ್. ಬೆಂಗಳೂರು, 3.ರಿಧಾನ್ಯ ಡಿ.ಗಾಣಿಕ ದಕ್ಷಿಣ ಕನ್ನಡ ಹಾಗೂ ಪಿ.ಎಂ.ಐಶ್ವರ್ಯ ಮಲವಳ್ಳಿ, ಲೈಟ್‌ವೆಲ್ಟರ್: 1. ಹೆಲೆನಾ ಜೂಜಿ ಸಿದ್ಧಿ ಉತ್ತರ ಕನ್ನಡ, 2.ವರ್ಷಾ ಅನ್ನಪೂರ್ಣ ದ.ಕ., 3. ಸ್ಪೂರ್ತಿ ಕೆ.ಎಸ್. ಬೆಂಗಳೂರು ಹಾಗೂ ನಂದಿನಿ ಶಿವಮೊಗ್ಹ.

ವೆಲ್ಟರ್ ವೆಯ್ಡ್: 1.ನಿವೇದಿತಾ ಆರ್. ಶಿವಮೊಗ್ಹ, 2.ಜಯಪ್ರದ ಮೈಸೂರು, 3.ಅನ್ನಿ ಪಿಂಟೋ ಬೆಳಗಾವಿ ಹಾಗೂ ಪೂಜಾ ಪಾಟೀಲ್ ಗುಲ್ಬರ್ಗ.

ಲೈಟ್ ಪ್ಲೈವೆಯ್ಡ್:1.ಸಂಭ್ರಮ ಎಂ.ಪಿ. ಬೆಂಗಳೂರು, 2. ಪಂಚಮಿ ಬಿಬಿ ಕೊಡಗು, 3.ಗಗನಾ ರಾವ್ ಮಂಗಳೂರು ಹಾಗೂ ಅಮೂಲ್ಯ ಮಂಡ್ಯ.

ಫೆದರ್‌ವೆಯ್ಟ್: 1.ನೇಹಾ ಸಿದ್ಧಿ ಉತ್ತರ ಕನ್ನಡ, 2.ಗ್ಯಾನೇಶ್ವರಿ ಪಿ.ಬಿ. ಬೆಳಗಾವಿ, 3.ಐಶ್ವರ್ಯ ಎಸ್ ಚಿತ್ರದುರ್ಗ ಹಾಗೂ ನಿಶ್ಚಿತಾ ಕುಮಾರ್ ಬೆಂಗಳೂರು. ಲೈಟ್‌ವೆಯ್ಡ್: 1.ಸಮಿಯಾ ಬಾನು ಬುದ್ದೇಸಾಬ್ ಪಾಟೀಲ್ ಉತ್ತರ ಕನ್ನಡ, 2.ದೀಕ್ಷಾ ಎನ್.ಬೆಂಗಳೂರು. 3. ಕನಕಲಕ್ಷ್ಮೀ ಬಿ. ಬೆಂಗಳೂರು ಹಾಗೂ ಭೂಮಿಕಾ ಎಚ್.ಎ, ಬೆಂಗಳೂರು.

ಮಿಡ್ಲ್ ವೆಯ್ಡ್: 1.ಹರ್ಷವರ್ಧಿನಿ ಎನ್ ಬೆಂಗಳೂರು, 2.ತನುಶೀ ಕೆ.ಆರ್. ಬೆಂಗಳೂರು, 3.ತನ್ವಿ ಸುರೇಶ್ ಶೆಟ್ಟಿ ವಿಜಯನಗರ ಹಾಗೂ ನಿಸರ್ಗ ರಾಮನಗರ.















Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News